ವಿಶ್ವಕಲ್ಯಾಣ ಸಹಕಾರ ಬ್ಯಾಂಕ್ ಗೆ ಆಯ್ಕೆ

Published on

ಹುಬ್ಬಳ್ಳಿ: ಇಲ್ಲಿಯ ವಿಶ್ವಕಲ್ಯಾಣ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಸಂಗಮೇಶ ಸಜ್ಜನರ ಹಾಗೂ ಉಪಾಧ್ಯಕ್ಷರಾಗಿ ವೀರೇಶ ಹುನಗುಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಎಂ.ಎಸ್. ರೇಣುಕಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ನಿರ್ದೇಶಕರಾದ ವಿಶ್ವನಾಥ ಹರ್ಲಾಪುರ, ಅಶೋಕ ಸಜ್ಜನ, ಶಿವಶಂಕರಪ್ಪ ಸಜ್ಜನರ, ಅರುಣ ಉಗರಗೋಳ, ಬಸವರಾಜ ಧಾರವಾಡಕರ, ಸಾವಿತ್ರಿ ತಂಗೋಡಿ, ರೇಣುಕಾ ಚಲವಾದಿ, ಭಾರತಿ ನರಗುಂದ, ಶೈಲಜಾ ಗಾಣಿಗೇರ, ಬ್ಯಾಂಕಿನ ವ್ಯವಸ್ಥಾಪಕಿ ಜಯಶ್ರೀ ನಾಗರಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net