"ಕುಂಭಮೇಳವೆಂಬುವುದು ಮಹಾಭಾರತದ ಅನುಭವ"-ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್

60e4fec8-36e1-4a10-bc1a-c2ce5a321a0d
ಮಹಾ ಕುಂಭಮೇಳ ಹಿನ್ನೆಲೆಯಲ್ಲಿ ವಿಶ್ವಹಿಂದು ಪರಿಷತ್ ಪ್ರಾಂತ ವತಿಯಿಂದ ಲೋಕದ ಹಿತಕ್ಕೋಸ್ಕರ ಪ್ರಾರ್ಥನೆ, ಮಾಘ ಹುಣ್ಣಿಮೆ ಶಾಹಿ ಸ್ನಾನ ಪೂರೈಸಲಾಯಿತು. ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಪರಿಷತ್‌ನ ಎಚ್‌ಕೆ ಪುರುಷೋತ್ತಮ್, ಗೋಪಾಲ್ ಕುತ್ತಾರ್ ಸಹಿತ ಹಲವರಿದ್ದರು.
Published on

ಮಂಗಳೂರು: ಫೆ.12ರ ಮಾಘ ಹುಣ್ಣಿಮೆ ಶಾಹಿ ಸ್ನಾನ ದಿವಸ ಕೋಟಿ ಕೋಟಿ ಭಕ್ತರನ್ನು ಕಂಡಾಗ ಆ ದೃಶ್ಯವನ್ನು ನೋಡಿದಾಗ ಸಂಪೂರ್ಣ ಭಾರತವನ್ನು ನೋಡಿದ ಅನುಭವ. ಇದಕ್ಕಿಂತ ಇನ್ನೊಂದು ಅದ್ಬುತ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.

ಮಹಾ ಕುಂಭಮೇಳ ಹಿನ್ನೆಲೆಯಲ್ಲಿ ವಿಶ್ವಹಿಂದು ಪರಿಷತ್ ಪ್ರಾಂತ ವತಿಯಿಂದ ಲೋಕದ ಹಿತಕ್ಕೋಸ್ಕರ ಪ್ರಾರ್ಥನೆ, ಮಾಘ ಹುಣ್ಣಿಮೆ ಶಾಹಿ ಸ್ನಾನ ಪೂರೈಸಿ ನಂತರ ಮಂಗಳೂರಿಗೆ ಆಗಮಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

144 ವರ್ಷಕೊಮ್ಮೆ ನಡೆಯುವ ಮಹಾ ಕುಂಭಮೇಳದ ಸಂದರ್ಭ ಪ್ರಯಾಗರಾಜದಲ್ಲಿ ಕೋಟ್ಯಾಂತರ ಭಕ್ತರು ಪುಣ್ಯ ತೀರ್ಥ ಸ್ನಾನದಲ್ಲಿ ಭಾಗವಹಿಸುವುದನ್ನು ನೋಡಿದಾಗ ನಮ್ಮ ಶ್ರದ್ದೆ, ಭಕ್ತಿ, ನಂಬಿಕೆಗಳು ಎಷ್ಟು ಬಲಿಷ್ಠ ವಾಗಿದೆ ಎಂಬ ಭಾವನೆ ಮೂಡುತ್ತದೆ.ದೇಶದ ಲಕ್ಷಾಂತರ ಊರುಗಳಿಂದ ಬಡವ ಶ್ರೀಮಂತ ಎನ್ನದೆ ಜಾತಿ, ಭಾಷೆ, ಪಂಥ, ಸಂಪ್ರದಾಯ, ಬೇಧ ಭಾವವನ್ನು ಮರೆತು ಕೋಟ್ಯಾಂತರ ಜನ ಪ್ರಯಾಗದಲ್ಲಿ ಸಂಗಮವಾಗುತ್ತಿರುವುದು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪ್ರಪಂಚಕ್ಕೆ ಎದ್ದು ತೋರಿಸುತ್ತಿದೆ. ಈ ಕುಂಭಮೇಳದಲ್ಲಿ ಪೂಜ್ಯ ಸಾಧು ಸಂತರು, ಅಖಾಡಗಳು, ನಾಗ ಸಾಧುಗಳು, ಮಹಾ ಮಂಡಲೇಶ್ವರರು ಅದೇ ರೀತಿ ಧಾರ್ಮಿಕ ಸಂಘ ಸಂಸ್ಥೆಗಳು ಆಶ್ರಮಗಳು ನೂರಾರು ರೀತಿಯಲ್ಲಿ ಧಾರ್ಮಿಕ ಚಟುವಟಿಕೆ, ಪ್ರವಚನ, ಭಜನೆ ಸಂಕೀರ್ತನೆಗಳು, ಪುರಾಣ ನಾಟಕಗಳು, ಸತ್ಸಂಗದ ಮುಖಾಂತರ ಭಕ್ತರನ್ನು ಧರ್ಮ ಜಾಗೃತಿ ಕಡೆ ಕೊಂಡುಯ್ಯುತ್ತಿದ್ದಾರೆ ಎಂದರು.

ಲೋಕ ಕಲ್ಯಾಣಕ್ಕಾಗಿ ಮಂಗಳೂರು ವಿಶ್ವಹಿಂದು ಪರಿಷತ್‌ನ ಎಚ್‌ಕೆ ಪುರುಷೋತ್ತಮ್, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಮನೋಹರ್, ಪುನಿತ್, ಕಿಶೋರ್ ಮಾಘ ಹುಣ್ಣಿಮೆ ಶಾಹಿ ಸ್ನಾನ ನೆರವೇರಿಸಿ ಮಂಗಳೂರಿಗೆ ಆಗಮಿಸಿದರು.

----------------

ಸರ್ಕಾರದ ಕಡೆಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಪೋಲೀಸ್, ಸೈನಿಕರು, ಸ್ವಚ್ಛತೆ ಕಾರ್ಮಿಕರು, ಸ್ವಯಂ ಸೇವಕರು ರಾತ್ರಿ ಹಗಲು ಎನ್ನದೆ ಮಾಡುತ್ತಿರುವ ಕೆಲಸ ಅವರ ಶ್ರದ್ಧೆಯು ಎದ್ದು ಕಾಣಿಸುತ್ತಿತ್ತು. ನಮ್ಮ ಜೀವಿತ ಕಾಲದಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ. ಪುಣ್ಯ ತೀರ್ಥ ಸ್ನಾನದಲ್ಲಿ ಭಾಗವಹಿಸುತ್ತಿರುವುದನ್ನು ನೋಡುವಾಗ ಇದ್ದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೊಂದಿಲ್ಲ.

-ಶರಣ್ ಪಂಪ್‌ವೆಲ್,

ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net