ಗೋ ಹತ್ಯೆ ವಿರುದ್ಧ ಕ್ರಮ : ಉಪ್ಪಿನಂಗಡಿ ಪೊಲೀಸರಿಗೆ ವಿಹಿಂಪ ಮನವಿ

manavi
ಬಕ್ರೀದ್ ಹಬ್ಬದ ಪ್ರಯುಕ್ತ ಗೋ ಹತ್ಯೆ ನಡೆಯದಂತೆ ಕ್ರಮ ವಹಿಸಲು ಉಪ್ಪಿನಂಗಡಿ ಠಾಣಾಧಿಕಾರಿ ಅವಿನಾಶ್‌ಗೆ ಮನವಿ ಸಲ್ಲಿಸಲಾಯಿತು.
Published on

ಉಪ್ಪಿನಂಗಡಿ: ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕಿದ್ದು, ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಹಬ್ಬದಂದು ಎಲ್ಲ ಅವಧಿಯಲ್ಲಿ ಬಿಗಿ ತಪಾಸಣೆ ನಡೆಸಬೇಕು ಎಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳ ಆಗ್ರಹಿಸಿದೆ. ಈ ಕುರಿತು ಬುಧವಾರ ಉಪ್ಪಿನಂಗಡಿ ಪೊಲೀಸರಿಗೆ ಮನವಿ ಸಲ್ಲಿಸಲಾಗಿದ್ದು, ಪ್ರಮುಖರಾದ ಮಹೇಶ್ ಬಜತ್ತೂರು, ಸಂತೋಷ್ ಅಡೆಕ್ಕಲ್, ರಾಜಶೇಖರ್ ಕರಾಯ, ಸಂತೋಷ್ ಕಾರ್ಲಾಪು, ಕಿಶೋರ್ ನೀರಕಟ್ಟೆ, ಮಂಜುನಾಥ ಕಂಗಿನಾರು ಬೆಟ್ಟು, ಪವನ್ ದುರ್ಗಾಗಿರಿ, ಚೇತನ್ ಬಂಡಾಡಿ, ಹಿತೇಶ್ ಕೊಳಕ್ಕೆ, ತೇಜಸ್ಸ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net