ವಿಶ್ವೇಶತೀರ್ಥರ ಆರಾಧನೋತ್ಸವ ಆರಂಭ

Pejavara mutt
Published on

ಉಡುಪಿ: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ಮೂಲ ವೃಂದಾವನ ಸನ್ನಿಧಿಯಲ್ಲಿ ಮಂಗಳವಾರ ಆರಂಭಗೊಂಡಿತು.

ಮಂಗಳವಾರ ಪೂರ್ವಾರಾಧನೆಯ ಅಂಗವಾಗಿ ವಿದ್ಯಾಪೀಠದ ಋತ್ವಿಜರಿಂದ ರಾಮ-ಕೃಷ್ಣ-ವೇದವ್ಯಾಸ-ನರಸಿಂಹ ಮಂತ್ರ ಹೋಮ ನೆರವೇರಿದವು. ಸಾಯಂಕಾಲ ವಿದ್ವಾಂಸರಿಂದ ವಿದ್ವತ್‌ಗೋಷ್ಠಿ ಆಯೋಜಿಸಲಾಗಿತ್ತು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮೂರು ದಿನ ನಡೆಯುವ ಆರಾಧನೆ ಕೋವಿಡ್ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತಗೊಳಿಸಿ, ಸರಳವಾಗಿ ಆಚರಿಸಲಾಗುತ್ತಿದೆ. ಬುಧವಾರ ಮಧ್ಯಾರಾಧನೆ ನಡೆಯಲಿದ್ದು, ಉಡುಪಿ ಹಾಗೂ ಮಂಗಳೂರಿನ ಸಮೀಪದ ಪೇಜಾವರ ಸಹಿತ ವಿವಿಧ ಶಾಖಾ ಮಠಗಳು, ವಿವಿಧ ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ ವಿಧಿಗಳು, ಅನ್ನಸಂತರ್ಪಣೆಯೊಂದಿಗೆ ಗುರು ಸ್ಮರಣೆ ನಡೆಯಲಿದೆ. ಗುರುವಾರ ಉತ್ತರಾರಾಧನೆ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net