

ಗಂಗೊಳ್ಳಿ: ಗಂಗೊಳ್ಳಿ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬುಧವಾರ ವಿಶ್ವರೂಪ ದರ್ಶನ ಸೇವೆ ನಡೆಯಿತು.
ಬೆಳಗ್ಗೆ ಭಜನೆ, ದೀಪಾಲಂಕಾರ, ದೇವರ ವಿಶ್ವರೂಪ ದರ್ಶನ, ಜಾಗರ ಪೂಜೆ, ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆದವು. ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಜರುಗಿದವು. ದೇವಳ ಆಡಳಿತ ಮಂಡಳಿ ಸದಸ್ಯರು, ಜಿಎಸ್‌ಬಿ ಸಮಾಜಬಾಂಧವರು, ಭಜಕರು ಮತ್ತಿತರರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.