ವಿಶ್ವಕರ್ಮರು ಶ್ರಮ ಜೀವಿಗಳು : ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಅಭಿಮತ

mng-17sep-vishvakarma
Published on




ಮಂಗಳೂರು : ವಿಶ್ವಕರ್ಮರು ಶ್ರಮಜೀವಿಗಳಾಗಿದ್ದು, ತಮ್ಮ ಕರ್ಮದಿಂದಲೇ ಗುರುತಿಸಿಕೊಂಡವರು. ಪ್ರತಿಯೊಂದು ಶುಭಕಾರ್ಯವು ವಿಶ್ವಕರ್ಮರ ಸಹಕಾರವಿಲ್ಲದೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವತಿಯಿಂದ ಮಂಗಳವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ತಾಳ್ಮೆಯಿಂದಲೇ ತಮ್ಮ ಕರ್ಮಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವವರು ವಿಶ್ವಕರ್ಮರು. ತಮ್ಮಲ್ಲಿರುವ ಕಲಾಕೌಶಲ್ಯಗಳಿಂದಲೇ ಸಮಾಜದಲ್ಲಿ ಹೆಗ್ಗಳಿಕೆ ಪಾತ್ರರಾದವರು. ಅವರ ಶ್ರಮಕ್ಕೆ ನಾವು ಗೌರವ ಕೊಡಬೇಕು ಎಂದರು
ಉಪನ್ಯಾಸ ನೀಡಿದ ಶಿಕ್ಷಕ ವೆಂಕಟರಮಣ ಪಾಂಡುರಂಗ ಆಚಾರ್ಯ ಅವರು ಮಾತನಾಡಿ ಭಾರತದಲ್ಲಿ ಹಲವಾರು ಕೌಶಲ ಹೊಂದಿರುವ ವಿಶ್ವಕರ್ಮರು ಇದ್ದಾರೆ. ಅವರ ಕೌಶಲಗಳಿಗೆ ಮಾನ್ಯತೆ ನೀಡುವ ಕೆಲಸ ಆಗನೇಕು ಎಂದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ , ಕಾಳಿಕಾಂಬ ವಿನಾಯಕ ದೇವಸ್ಥಾನ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net