

ಮಂಗಳೂರು : ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಹಿರಿಯರ ಮಾರ್ಗದರ್ಶನದಂತೆ ನಿರಂತರ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಭವಿಷ್ಯ ಉಜ್ವಲವಾಗಲಿ ಎಂದು ರೋಟರಿ ಸದಸ್ಯ ಗಣೇಶ್ ಕಾಮತ್ ಹೇಳಿದರು.
ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾದ ವತಿಯಿಂದ ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಭಾದ ಅಧ್ಯಕ್ಷ ನಾಗರಾಜ್ ಪಾಲ್ಕೆ ಮಾತನಾಡಿ ಮೂಡುಬಿದಿರೆಯಲ್ಲಿ ಶ್ರೀ ನಾಗಲಿಂಗ ಸ್ವಾಮಿ ಸಂಸ್ಕೃತ ಪಾಠ ಶಾಲೆ ಕಟ್ಟಡ ನಿರ್ಮಾಣ ಆರಂಭಗೊಂಡಿದ್ದು ಶೀಘ್ರ ಪೂರ್ಣಗೊಳ್ಳಲಿದೆ ಎಂದರು.
ಪತ್ರಕರ್ತ ಬೆಳುವಾಯಿ ಸೀತಾರಾಮ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು. ಸಭಾದ ಗೌರವಾಧ್ಯಕ್ಷ ಧನಂಜಯ ಉಪಸ್ಥಿತರಿದ್ದರು.
ಸಂಗೀತ ಕ್ಷೇತ್ರದ ಸಾಧಕ ಕೆ.ರವಿಶಂಕರ್ ಆಚಾರ್ಯ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಿಂಚನ , ಸಮೀಕ್ಷಾ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಿಂಚನ ಇವರುಗಳನ್ನು ಸನ್ಮಾನಿಸಲಾಯಿತು.
ಸಭಾದ ಖಜಾಂಚಿ ಯು. ಗಣೇಶ್ ವಿದ್ಯಾರ್ಥಿ ವೇತನದ ವಿವರ ನೀಡಿದರು. ಕಾರ್ಯದರ್ಶಿ ಸುಜೀರ್ ವಿನೋದ್ ಸ್ವಾಗತಿಸಿ, ಜತೆ
ಕಾರ್ಯದರ್ಶಿ ಕೆ. ಎ.ಗಣೇಶ್ ಆಚಾರ್ಯ ವಂದಿಸಿದರು. ಬಿ. ಉದಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.