

ಹೂವಿನಹಡಗಲಿ: ಮಾಲಾಧಾರಿಗಳು ದುರ್ಗುಣಗಳನ್ನು ತ್ಯಾಗ ಮಾಡಿ ಆಧ್ಯಾತ್ಮದಲ್ಲಿ ಸದಾಕಾಲವು ಭಗವಂತನ ಸ್ಮರಣೆ ಮಾಡಿದಾಗ ಲೋಕಕಲ್ಯಾಣವಾಗಲಿದೆ ಎಂದುಚೌಕಿಮಠದ ಗಾಡಿತಾತ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗತಿಬಸಾಪುರ ಗ್ರಾಮದ ಸಾಯಿ ಸನ್ನಿಧಿಯಲ್ಲಿ ದತ್ತ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ದತ್ತಮಾಲಾ ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ನಾಗತಿಬಸಾಪುರ ಗ್ರಾಮದ ಸಾಯಿಮಂದಿರವು ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಸನ್ನಿಧಿಯಲ್ಲಿ ಮುಂದಿನ ದತ್ತಜಯಂತಿಯಲ್ಲಿ 5 ಅಡಿ ಎತ್ತರದ ಸಾಯಿಬಾಬಾ ಮೂರ್ತಿ ಹಾಗೂ ದ್ವಾರಕಾಮಯಿಯಲ್ಲಿನ ದುನಿಯನ್ನ ನಿರ್ಮಾಣ ಮಾಡುವುದರ ಮೂಲಕ ಶಿರಡಿ ಸಂಸ್ಥಾನದಂತೆ ಬೆಳೆಯಲಿ. ಮಾಲಾಧಾರಿಗಳಲ್ಲಿ ಗುರು ಸ್ಮರಣೆ ಅಗತ್ಯ ಎಂದರು.
ಆಧ್ಯಾತ್ಮಿಕ ಚಿಂತಕ ಎನ್.ಡಿ.ಸ್ವಾಮಿ ಮಾತನಾಡಿದರು. ಸಾಯಿ ಸೇವಾ ಸಮಿತಿ ಸದಸ್ಯ ಎಂ.ನಿಂಗಪ್ಪ, ಸಾಯಿ ದೀಕ್ಷಾ ಬಳಗದ ಸದಸ್ಯರಾದ ಮಲ್ಲಿಕಾರ್ಜುನ, ಸಂತೋಷ್, ಜಗನ್ನಾಥ, ಎಂ.ಗಣೇಶ, ಎಚ್.ವಿಶ್ವನಾಥ, ಶರಣಪ್ಪ, ಬಸವನಗೌಡ, ಎಚ್.ಗಣೇಶ, ಮನೋಹರ, ಎಂ.ಪಿ.ಎಂ. ವೀರಯ್ಯ ಇತರರಿದ್ದರು.