ಮೈಸೂರು ಎಸ್ಪಿಯಾಗಿ ವಿಷ್ಣುವರ್ಧನ್ ಅಧಿಕಾರ ಸ್ವೀಕಾರ

mysore
Published on

ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ವಿಷ್ಣುವರ್ಧನ್ ಅಧಿಕಾರ ಸ್ವೀಕರಿಸಿದರು.

ಎಸ್‌ಪಿ ಕಚೇರಿಗೆ ಆಗಮಿಸಿದ ಇವರಿಗೆ ಪೊಲೀಸರು ಗೌರವ ವಂದನೆಯೊಂದಿಗೆ ಸ್ವಾಗತ ಕೋರಿದರು. ಬಳಿಕ ಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡರು.

ನೂತನ ಎಸ್‌ಪಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್.ನಂದಿನಿ ಸೇರಿದಂತೆ ಇನ್ನಿತರರ ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ವಿಷ್ಣುವರ್ಧನ್ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು.

ಜತೆಗೆ, ಮೈಸೂರು ನಗರದಲ್ಲೂ ಡಿಸಿಪಿ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net