

ಮಂಡ್ಯ: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ದೈಹಿಕವಾಗಿ ಇಲ್ಲದಿದ್ದರೂ ಅಭಿವಾನಿಗಳ ಮನದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ತಾಲೂಕಿನ ಚೀರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಡಾ.ವಿಷ್ಣುವರ್ಧನ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಷ್ಣುವರ್ಧನ್ ಅವರ 72ನೇ ವರ್ಷದ ಜಯಂತ್ಯುತ್ಸವ, ಟ್ರಸ್ಟ್‌ನ ಮೊದಲ ವಾರ್ಷಿಕೋತ್ಸವ, ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ, ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ವಿಷ್ಣು ನೆನಪಲ್ಲೇ ಅಭಿವಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದು, ರಕ್ತದಾನ ಮತ್ತು ಆರೋಗ್ಯ ತಪಾಸಣೆಯಂತಹ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಡಾ.ರಾಜಕುವಾರ್ ಅವರ ನಂತರ ವಿಷ್ಣುವರ್ಧನ್ ಅವರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ವಾಜಿ ಸದಸ್ಯ ರಮೇಶ್ ಮಿತ್ರ ವಾತನಾಡಿದರು. ಜಿಪಂ ವಾಜಿ ಸದಸ್ಯ ಡಿ.ಮಂಜುನಾಥ್, ತಾಪಂ ವಾಜಿ ಸದಸ್ಯ ಕೆ.ಡಿ.ಶಿವಕುವಾರ್, ಕಾಂಗ್ರೆಸ್ ಮುಖಂಡ ತಗ್ಗಹಳ್ಳಿ ಕೃಷ್ಣ, ಡಾನ್ ಬಾಸ್ಕೋ ನಿರ್ದೇಶಕ ಡಾ.ಪೀಟರ್, ಹಳುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಅನುಪಮ ಇತರರಿದ್ದರು.
ಇದೇ ವೇಳೆ ಸೈನಿಕ ಸಿ.ಡಿ.ಪಾಪಣ್ಣ, ನಿವೃತ್ತ ಶಿಕ್ಷೃಕ ವೆಂಕಟೇಶಯ್ಯ, ಹಾರ್ಮೋನಿಯಂ ವಾಸ್ಟರ್ ವೆಂಕಟರಾಮು, ವಿದ್ಯಾರ್ಥಿನಿಯರಾದ ಪ್ರಿಯದರ್ಶಿನಿ, ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.