ಫೆ.12ರಿಂದ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವ

New Project (71)
Published on

ಮೂಲ್ಕಿ: ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ೆ.12ರಿಂದ 17ರವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಹಯಗ್ರೀವ ಪಡ್ಡಿಲ್ಲಾಯ, ರಾಜಾರಾಮ್ ಭಟ್ ಪೌರೋಹಿತ್ಯದಲ್ಲಿ ನೆರವೇರಿತು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜಾ, ಗೋಪಾಲ ಕೃಷ್ಣ ಭಟ್ ಬಪ್ಪನಾಡು, ಕಾಶಿನಾಥ ಶೆಣೈ ಕಟಪಾಡಿ, ಮೂಲ್ಕಿ ನಪಂ ಸದಸ್ಯರಾದ ಹರ್ಷರಾಜ ಶೆಟ್ಟಿ, ಯೋಗೀಶ್ ಕೋಟ್ಯಾನ್, ರಾಕಾ ಕೋಟ್ಯಾನ್, ಸುಭಾಷ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುನೀಲ್ ಆಳ್ವ, ಭಾಸ್ಕರ್ ಎಂ.ಸಾಲ್ಯಾನ್ ಮುಂಬೈ, ಸೂರ್ಯಕಾಂತ ಜೆ.ಸುವರ್ಣ, ಉದಯ್ ಕುಮಾರ್ ಶೆಟ್ಟಿ ಆದಿಧನ್, ಜೀವನ್ ಕೆ.ಶೆಟ್ಟಿ, ಸಮಿತಿ ಸದಸ್ಯರಾದ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಕಾರ್ಯದರ್ಶಿ ವೈ.ಎನ್.ಸಾಲ್ಯಾನ್, ಪ್ರವೀಣ್ ಡಿ.ಕೋಟ್ಯಾನ್, ಕೋಶಾಧಿಕಾರಿ ಸುರೇಶ್ ರಾವ್, ಮೋಹನ್ ಕೋಟ್ಯಾನ್ ಶಿಮಂತೂರು, ವಕೀಲ ರವೀಶ್ ಕಾಮತ್, ಜನಾರ್ದನ ಕಾರ್ನಾಡ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಕುಮಾರ್, ಶಶೀಂದ್ರ ಸಾಲ್ಯಾನ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ, ಕಿಶೋರ್ ಸಾಲ್ಯಾನ್ ಬಪ್ಪನಾಡು, ಸುಧೀರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ರಮೇಶ್ ಅಮೀನ್ ಕೊಕ್ಕರಕಲ್, ಜಯಪಾಲ ಶೆಟ್ಟಿ ಐಕಳ, ಗುಣಸಾಗರ್ ಶೆಟ್ಟಿ, ಕೃಷ್ಣ ಶೆಟ್ಟಿ, ಮಹಿಮ್ ಹೆಗ್ಡೆ, ದೀಪಕ್ ಪಡುಬೈಲು, ಪುರಂದರ ಸಾಲ್ಯಾನ್, ಕಿಶೋರ್ ಪೂಜಾರಿ ಹರಿಹರ, ವಕೀಲ ರವೀಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net