

ಕಾಸರಗೋಡು: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವರ್ಷಾವಧಿ ಜಾತ್ರೆ ಫೆ.12ರಿಂದ 16ರವರೆಗೆ ತಾಂತ್ರಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಉತ್ಸವದ ಯಶಸ್ವಿಗಾಗಿ ಊರ ಪರವೂರ ಭಕ್ತಾದಿಗಳ ಸಭೆ ಎಡನೀರು ಮಠದಲ್ಲಿ ಜರಗಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ವೇಣುಗೋಪಾಲನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಕೆ.ಮಾಧವ ಹೇರಳ, ಕೆ.ವಿ ಬಾಲಕೃಷ್ಣ, ಸತೀಶ್ ರಾವ್ ಎಡನೀರು, ಕೆ.ವಿ ಬಾಲಕೃಷ್ಣನ್, ಮಹೇಶ್ ಕುಮಾರ್ ಎಡನೀರು, ಉಮೇಶ ನರಿಕಡವು ಮೊದಲಾದವರು ಉಪಸ್ಥಿತರಿದ್ದರು. ಸೂರ್ಯ ಭಟ್ ಎಡನೀರು ಸ್ವಾಗತಿಸಿದರು. ಗೋಪಾಲ ಮಾಸ್ಟರ್ ವಂದಿಸಿದರು. ಸೇವಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೆ ಸೂರ್ಯನಾರಾಯಣ ಭಟ್ ಅಧ್ಯಕ್ಷ, ಉಮೇಶ್ ನರಿಕಡಪು ಕಾರ್ಯದರ್ಶಿ, ಗೋಪಾಲ ಮಾಸ್ಟರ್ ಕೋಶಾಧಿಕಾರಿ ಹಾಗೂ ಇತರ 30 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.