ವಿಷ್ಣು ಸಿನಿಮಾದಿಂದ ನನಗೂ ಪ್ರೇರಣೆ

19KUDLIGI2
ಕೂಡ್ಲಿಗಿ ಪಾದಗಟ್ಟೆ ಸರ್ಕಲ್ ಬಳಿ ವಿಷ್ಣುವರ್ಧನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಕೇಕ್ ಕತ್ತರಿಸಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪ್ರಮುಖರಾದ ಕರೇಗೌಡ, ಭಾರತಿ, ಎಂ.ಬಸವರಾಜ, ಬಸಮ್ಮ, ಮಮತಾ, ಬಿ.ಶರಣಪ್ಪ, ಬಿ.ಲೋಕೇಶ್, ಕರಿಯಪ್ಪ, ಪ್ರಶಾಂತ, ಸುಧಾಕರ ಇದ್ದರು.
Published on

ಕೂಡ್ಲಿಗಿ: ಹಿಂದುಳಿದ ತಾಲೂಕಿನ ಜನರು ಆರ್ಥಿಕವಾಗಿ ಬಡವರು ಇರಬಹುದು. ಆದರೆ, ಕಲಾ ಪ್ರಾವೀಣ್ಯದಲ್ಲಿ ಶ್ರೀಮಂತರಾಗಿದ್ದಾರೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಷ್ಣುವರ್ಧನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು. ರಂಗಕಲೆಯ ತವರೂರು ಆಗಿರುವ ಕೂಡ್ಲಿಗಿ ತಾಲೂಕಿನಲ್ಲಿ ಅಸಂಖ್ಯಾತ ವಿಷ್ಣುವರ್ಧನ್ ಅಭಿಮಾನಿಗಳು ಇದ್ದಾರೆ. ನಾನು ಕೂಡ ಅವರ ಅಭಿಮಾನಿಯಾಗಿದ್ದು, ವಿಷ್ಣುವರ್ಧನ್ ಅಭಿನಯದ ಅನೇಕ ಸಿನಿಮಾಗಳನ್ನು ನೋಡಿ ಪ್ರೇರಿತನಾಗಿದ್ದೇನೆ ಎಂದರು.

ಕಲೆಗೆ ಜೀವ ತುಂಬಿ ನಟಿಸುವಲ್ಲಿ ವಿಷ್ಣುವರ್ಧನ್ ಸಿದ್ಧಹಸ್ತರು. ನಾಗರಹಾವು ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪ್ರವೇಶಿಸಿದರು. ಕೌಟುಂಬಿಕ ಚಿತ್ರಗಳು ಸೇರಿದಂತೆ ಎಲ್ಲ ಪಾತ್ರಗಳಲ್ಲಿ ಅಭಿನಯಸಿದ್ದು, ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ಸ್ವಾಗತರ್ಹ. ವಿಷ್ಣವರ್ಧನ್ ಸಮಾಧಿ ನಿರ್ಮಾಣಕ್ಕೆ ಜಾಗದ ಕೊರತೆ ಎದುರಾಗಿದ್ದು, ಶೀಘ್ರ ಸಮಸ್ಯೆಗಳು ಬಗೆಹರಿಸಿ ಸಮಾಧಿ ನಿರ್ಮಿಸಬೇಕು ಎಂದು ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಅನ್ನ ಸಂತರ್ಪಣೆ ನಡೆಸಲಾಯಿತು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪ್ರಮುಖರಾದ ಕರೇಗೌಡ, ಬಿ.ಕೆ.ರಾಘವೇಂದ್ರ, ನಲ್ಲಮುತ್ತಿ ದುರುಗೇಶ್, ಡಿ.ಎಚ್.ದುರುಗೇಶ್, ಭಾರತಿ, ಎಂ.ಬಸವರಾಜ, ಬಸಮ್ಮ, ಮಮತಾ, ಬಿ.ಶರಣಪ್ಪ, ಬಿ.ಲೋಕೇಶ್, ಕರಿಯಪ್ಪ, ಪ್ರಶಾಂತ, ಸುಧಾಕರ, ಎ.ಎಂ.ಚಲಪತಿ, ಅಂಗಡಿ ಗಣೇಶ, ಬಾಬಣ್ಣ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಜಿಂಕಾಲ್ ನಾಗೇಶ್, ಮಾಳಗಿ ಓಬಳೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net