ಕನ್ನಡ ಚಿತ್ರರಂಗಕ್ಕೆ ವಿಷ್ಣು ಕೊಡುಗೆ ಅಪಾರ

actor vishnuvardan birthday
vishnu birth day in nelamgalala
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಾಡಿನ ಸಾಂಸ್ಕೃತಿಕ ಕ್ಷೇತ್ರ ಮತ್ತು ಚಿತ್ರರಂಗದ ಬೆಳವಣಿಗೆಗೆ ಚಿತ್ರನಟ ಡಾ.ವಿಷ್ಣುವರ್ಧನ್ ಅವರ ಕೊಡುಗೆ ಅಪಾರ ಎಂದು ವಿಷ್ಣು ಸೇವಾ ಸಮಿತಿ ರಾಜ್ಯಾಧ್ಯಕ್ಷ ವಿ.ಕುಮಾರ್ ಹೇಳಿದರು.
ನಗರಸಭೆ ವ್ಯಾಪ್ತಿಯ ಹೊನ್ನಗಂಗಯ್ಯನಪಾಳ್ಯದ ಡಾ.ವಿಷ್ಣು ಮಂದಿರ ಸಮೀಪ ವಿಷ್ಣು ಸೇವಾಸಮಿತಿ ಆಯೋಜಿಸಿದ್ದ ಡಾ.ವಿಷ್ಣುವರ್ದನ್ ಹುಟ್ಟುಹಬ್ಬದಲ್ಲಿ ಮಾತನಾಡಿದರು. 4 ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಡಾ.ವಿಷ್ಣುವರ್ಧನ್ ಅವರು ಉತ್ತಮ ಸಂದೇಶಗಳಿರುವ ಚಿತ್ರಗಳನ್ನು ನೀಡಿದ್ದಾರೆ. ಚಿತ್ರಗಂಗಕ್ಕೆ ಹೊಸದಾಗಿ ಕಾಲಿಡುವ ಯುವಪೀಳಿಗೆ ಡಾ.ವಿಷ್ಣುವರ್ಧನ್ ಅವರ ಗುಣಗಳನ್ನು ಅನುಸರಿಸಿದರೆ, ಉತ್ತಮ ನಟ ಆಗುತ್ತಾರೆ ಎಂದ ಅವರು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ವಿಷ್ಣುಸ್ಮಾರಕ ನಿರ್ಮಾಣಕ್ಕೆ ಮುಂದಾಗದಿರುವುದು ಬೇಸರದ ಸಂಗತಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net