ಬ್ರಹ್ಮಾವರ ಮಹಿಳೆ ಕೊಲೆ ಪ್ರಕರಣ, ಪತಿ ಸಹಿತ ಇಬ್ಬರು ಅರೆಸ್ಟ್

Vishala ganiga Murder
Published on

ಉಡುಪಿ: ಬ್ರಹ್ಮಾವರ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ12 ರಂದು ಸಂಭವಿಸಿದ ವಿಶಾಲಾ ಗಾಣಿಗ (35) ಅನುಮಾನಾಸ್ಪಾದ ಸಾವು ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಬಿಜೂರು ಚಾರುಕೂಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಾಮಕೃಷ್ಣನನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಲಯವು ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಒಬ್ಬ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂದಿಸಿದ್ದು, ಆತನನ್ನು ಉಡುಪಿಗೆ ಕರೆತರಲಾಗುತ್ತಿದೆ ಇನ್ನೊರ್ವ ಆರೋಪಿ ತಲೆಮರಿಸಿಕೊಂಡಿದ್ದಾನೆ.

ಪತ್ನಿಯ ಸಾವಿನ ಬಳಿಕ ದುಬೈನಿಂದ ಬಂದಿದ್ದ ರಾಮಕೃಷ್ಣನನ್ನು ಎರಡುಮೂರು ಭಾರಿ ವಿಚಾರಣೆ ನಡೆಸಲಾಗಿತ್ತು. ಎರಡು ದಿನಗಳ ಹಿಂದೆ ಪೊಲೀಸರು ಮತ್ತೆ ಸಂಶಯದ ಮೇರೆಗೆ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸುಪಾರಿ ಕೊಟ್ಟು ವಿಶಾಲಾ ಗಾಣಿಗ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದ್ದು, ಕೊಲೆ ಕಾರಣ ಇತರೆ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ವಿಶಾಲ ಗಾಣಿಗ ಅವರು ದುಬೈನಿಂದ ಊರಿಗೆ ಮರಳಿದ್ದು, ಜುಲೈ.12 ರಂದು ತಮ್ಮ ಫ್ಲಾೃಟ್‌ನ ಕೊಠಡಿಯಲ್ಲಿ ಒಬ್ಬರೆ ಇದ್ದಾಗ ವಯರ್‌ನಿಂದ ಕುತ್ತಿಗೆ ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದಲ್ಲಿರುವ 2 ಲಕ್ಷ ರೂ. ಮೌಲ್ಯದ ಆಭರಣ ನಾಪತ್ತೆಯಾಗಿದ್ದು, ಹಣಕ್ಕಾಗಿ ನಡೆದ ಕೃತ್ಯ ಎಂದು ಆರಂಭದಲ್ಲಿ ಬಿಂಬಿತವಾಗಿತ್ತು. ಈ ನಡುವೆ ಅಂದು ವಿಶಾಲಾ ತೆರಳಿದ್ದ ಆಟೋರಿಕ್ಷಾ ಚಾಲಕನನ್ನು ತನಿಖೆಗೆ ಒಳಪಡಿಸಲಾಗಿತ್ತು. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net