

ಶಿರ್ವ: ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಶ್ರೀಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ಮಂಗಲಮೂರ್ತಿ ಶ್ರೀವಿನಾಯಕನ ವಿಸರ್ಜನಾ ಪೂಜೆ ಸೋಮವಾರ ಸಂಪನ್ನಗೊಂಡಿತು. ಕ್ಷೇತ್ರದ ವೈದಿಕರಾದ ಸಂದೇಶ್ ಭಟ್, ನರೇಶ್ ಭಟ್, ಮಂಜುನಾಥ ಭಟ್ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಆಡಳಿತ ಮಂಡಳಿ ಸದಸ್ಯರು, ಭಗದ್ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4ಕ್ಕೆ ವಿಜರ್ಸನಾ ಪೂಜೆ ನಂತರ ಶ್ರೀದೇವಳದಿಂದ ಶೋಭಾಯಾತ್ರೆಯೊಂದಿಗೆ ಹೇರೂರು ಗಂಪ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು.