ವೀಸಾ ಕೊಡಿಸುವ ನೆಪದಲ್ಲಿ 6 ಲಕ್ಷ ರೂ. ವಂಚನೆ

visa fraud
Published on

ಉಡುಪಿ: ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಟ್ಸ್ ಅಪ್‌ನಲ್ಲಿ ಬಂದ ವೀಸಾ ಮಾಡಿಕೊಡುವ ಪ್ರಕಟಣೆ ನಂಬಿ ಉಡುಪಿ ನಿವಾಸಿಯೊಬ್ಬರು 6 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜಯರಾಜ್ ಆಚಾರ್ಯ ಎಂಬವರು ಮೊಬೈಲ್ ಸಂದೇಶದಲ್ಲಿದ್ದ ದೂರವಾಣಿಗೆ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದಾತ ತಾನು ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದು, ಆನ್‌ಲೈನ್‌ನಲ್ಲಿ ಇಂಟರ್‌ವ್ಯೆವ್ ನಡೆಸಿದ್ದಾನೆ. ನಂತರ ವಿಸಾ ಮಾಡಿಸಲು ಚಾರ್ಜ್ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ ಜ.9 ರಿಂದ ಫೆ.8 ರವರೆಗೆ 1 ತಿಂಗಳ ಅವಧಿಯಲ್ಲಿ ಒಟ್ಟು ರೂ. 6,90,343 ಹಣವನ್ನು ವಿವಿಧ ಖಾತೆಗೆ ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ವೀಸಾ ನೀಡದೇ ಪಡೆದ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net