ಕರೊನಾ 700ರ ಸನಿಹ

web (2)
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬುಧವಾರ 47 ಮಂದಿಯಲ್ಲಿ ಕರೊನಾ ಸೋಂಕು ಖಚಿತಗೊಂಡಿದ್ದು 68 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. 20 ಮಂದಿ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 1243 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಕ್ರಿಯವಾಗಿರುವ 671 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ 25 ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ. ಗುಣಮುಖರಾದವರ ಸಂಖ್ಯೆ 547 ಕ್ಕೇರಿದೆ.

ಬುಧವಾರ ಪತ್ತೆಯಾದವರಲ್ಲಿ ಓರ್ವ ಮೃತಪಟ್ಟಿದ್ದಾರೆ. ಹೋಮ್ ಐಸೋಲೇಷನ್​ನಲ್ಲಿ 29, ಡಿಸಿಎಚ್​ನಲ್ಲಿ 10, ಸಿಸಿಸಿಯಲ್ಲಿ 7, ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಹೌಸಿಂಗ್ ಬೋರ್ಡ್​ನ ಪುರುಷ, ನೆಹರು ನಗರದ ಪುರುಷ, ಕಲ್ಯಾಣನಗರದ ಪುರುಷ, 70 ವರ್ಷದ ವೃದ್ಧ, ಅರಣ್ಯ ಇಲಾಖೆ ಓರ್ವ ಸಿಬ್ಬಂದಿ, ನರಿಗುಡ್ಡನಹಳ್ಳಿಯ ಪುರುಷ, ವಿಜಯನಗರದ ಯುವಕ, ವಿಜಯಪುರ ಬಡಾವಣೆ ಯುವಕ, ಪಾಂಡುರಂಗ ದೇವಾಲಯ ಸಮೀಪದ ಮಹಿಳೆ, ಪೆನ್ಷನ್ ಮೊಹಲ್ಲಾದ ಪುರುಷ, ಇಬ್ಬರು ಯುವತಿಯರು, ಮಹಿಳೆ, ನಾಯ್ಡು ಬೀದಿ ಯುವತಿ, ಮಹಿಳೆ ಹಾಗೂ ನೆಹರು ರಸ್ತೆಯ 70 ವರ್ಷದ ವೃದ್ಧ ಸೋಂಕಿತರಲ್ಲಿ ಸೇರಿದ್ದಾರೆ.

ರೋಗಿ ಸಂಖ್ಯೆ 144290 ರ ಪ್ರಾಥಮಿಕ ಸಂಪರ್ಕದಲ್ಲಿದ್ದ ಯುವತಿ, ರೋಗಿ ಸಂಖ್ಯೆ 149294ರ ಪ್ರಾಥಮಿಕ ಸಂಪರ್ಕದಲ್ಲಿದ್ದ ಯುವಕ, ರೋಗಿ ಸಂಖ್ಯೆ 150754ರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆ, ಚಿಕ್ಕಮಗಳೂರಿನ ಪುರುಷ, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪುರುಷ, ಯುವತಿ, ಪುರುಷ ಹಾಗೂ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದುವರೆಗೆ 451 ಕಂಟೇನ್ಮೆಂಟ್ ಜೋನ್​ಗಳಲ್ಲಿ 348 ಸಕ್ರಿಯ ಕಂಟೇನ್ಮೆಂಟ್​ಗಳಿದ್ದು 103 ಪ್ರದೇಶಗಳನ್ನು ತೆರವುಗೊಳಿಸಲಾಗಿದೆ.

8 ಜನರಿಗೆ ಪಾಸಿಟಿವ್: ತರೀಕೆರೆ ಮತ್ತು ಅಜ್ಜಂಪುರದಲ್ಲಿ 8 ಮಂದಿಯಲ್ಲಿ ಬುಧವಾರ ಕರೊನಾ ವೈರಸ್ ಕಾಣಿಸಿಕೊಂಡಿದೆ. ಅಜ್ಜಂಪುರದ ಸಿದ್ದರಾಮೇಶ್ವರ ರಸ್ತೆಯ ಯುವಕ, ಪಟ್ಟಣದ ಬೇಗೂರಯ್ಯ ಬೀದಿಯ 15 ವರ್ಷದ ಬಾಲಕಿ, ಯುವಕ, ಕೆಇಬಿ ಕಚೇರಿ ಸಮೀಪದ ಪುರುಷನಿಗೆ ವೈರಸ್ ಇರುವುದು ದೃಢಪಟ್ಟಿದೆ.

ತೋಪಣ್ಣ ಬೀದಿಯ ಪುರುಷ, ಆಶ್ರಯ ಬಡಾವಣೆ 12ನೇ ಕ್ರಾಸ್​ನ ಮಹಿಳೆ, ನಾಗಪ್ಪ ಕಾಲನಿಯ ಪುರುಷ ಹಾಗೂ ತಾಲೂಕಿನ ಬೆಟ್ಟದಹಳ್ಳಿಯ ಪುರುಷನಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸೋಂಕಿತರನ್ನು ಚಿಕ್ಕಮಗಳೂರಿನ ಕರೊನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತೆ ಪತಿಗೂ ಪಾಸಿಟಿವ್: ಎನ್.ಆರ್.ಪುರದ ಪ್ರವಾಸಿ ಮಂದಿರದ ಬಳಿ ನಿವಾಸಿಯೊಬ್ಬರಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿದ್ದರಿಂದ ಅವರನ್ನು ಹೋಮ್ ಐಸೋಲೇಷನ್​ನಲ್ಲಿ ಇಡಲಾಗಿತ್ತು. ಇದೀಗ ಆಕೆಯ ಪತಿ (60 ವರ್ಷ)ಗೂ ವೈರಸ್ ತಗುಲಿರುವುದು ದೃಢವಾಗಿದೆ. ಮನೆಯಿಂದ ಹೊರಬಾರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net