

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಅಽಕೃತ ವೆಬ್‌ಸೈಟ್‌ಗೆ ವೈರಸ್ ಅಟ್ಯಾಕ್ ಆದ ಪರಿಣಾಮ ಅಶ್ಲೀಲ ವಿಡಿಯೋಗಳು ಅಪ್‌ಲೋಡ್ ಆಗಿದ್ದವು. ಕವಿವಿಯ www.kud.in ವೆಬ್‌ಸೈಟ್ 2 ದಿನಗಳ ಹಿಂದೆ ವೈರಸ್ ಅಟ್ಯಾಕ್ ಆಗಿತ್ತು. ವಿಶ್ವವಿದ್ಯಾಲಯದ ಶೈಕ್ಷಣಿಕ ಮಾಹಿತಿಗಾಗಿ ವೆಬ್‌ಸೈಟ್ ತೆರೆದವರಿಗೆ ಅಶ್ಲೀಲ ವಿಡಿಯೋಗಳ ದರ್ಶನವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ವೆಬ್‌ಸೈಟ್‌ನ ತಾಂತ್ರಿಕ ಸಿಬ್ಬಂದಿಯನ್ನು ಸಂಪರ್ಕಿಸಿ ಸರಿಪಡಿಸಲು ಸೂಚಿಸಿದ್ದರು. ಸಿಬ್ಬಂದಿ ವೆಬ್‌ಸೈಟ್ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದು, ಮೊದಲಿನಂತೆ ಕಾರ್ಯನಿರ್ವಹಿಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಚನ್ನಪ್ಪ, ವೆಬ್‌ಸೈಟ್‌ಗೆ ಹ್ಯಾಕ್ ಆಗಿಲ್ಲ. ವೈರಸ್ ಅಟ್ಯಾಕ್ ಆಗಿದ್ದರಿಂದ ಈ ರೀತಿಯಾಗಿತ್ತು. ತಾಂತ್ರಿಕ ಸಿಬ್ಬಂದಿ ಸರಿಪಡಿಸಿದ್ದಾರೆ ಎಂದರು.