ಒಂದೇ ಮತದಿಂದ ಹುನುಮೇಶ ಗೋಡಿನಾಳ ಗೆಲುವು

Untitled design(5)
Published on

ಸಿಂಧನೂರು: ತಾಲೂಕಿನ ವಿರುಪಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಲ್ಲದಗುಡ್ಡ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬುಧವಾರ ಅಭ್ಯರ್ಥಿ ಹನುಮೇಶ ಗೋಡಿನಾಳ ಒಂದೇ ಮತದಿಂದ ಗೆಲುವು ಸಾಧಿಸಿದ್ದಾರೆ.

ಗ್ರಾಪಂ ಸದಸ್ಯ ತ್ರಿನಾಥ ಅಕಾಲಿಕವಾಗಿ ಮೃತಪಟ್ಟಿದ್ದರು. ಹೀಗಾಗಿ ಸಾಮಾನ್ಯ ಮೀಸಲು ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಚಲಾವಣೆಯಾದ ಒಟ್ಟು 479 ಮತಗಳ ಪೈಕಿ, ಹನುಮೇಶ ಗೋಡಿನಾಳ 222 ಮತ ಮತ್ತು ಕೆ.ವಿರುಪಾಕ್ಷಿ 221 ಮತಗಳನ್ನು ಪಡೆದರೆ, 36 ಮತಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ. ಕೇವಲ ಒಂದೇ ಮತದ ಅಂತರದಿಂದ ಹನುಮೇಶ ಗೋಡಿನಾಳ ಗೆಲುವು ಸಾಧಿಸಿದ್ದಾರೆಂದು ಪ್ರಭಾರ ತಹಸೀಲ್ದಾರ್ ಕೆ.ಶೃತಿ ಘೋಷಣೆ ಮಾಡಿದ್ದಾರೆ.

ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಎಚ್., ಚುನಾವಣಾಧಿಕಾರಿಗಳಾದ ವೀರೇಶ ಗೋನ್ವಾರ, ರಾಮದಾಸ, ಚುನಾವಣಾ ಶಿರಸ್ತೇದಾರ ಅಂಬಾದಾಸ್ ಸೂರ್ಯವಂಶಿ, ಎಣಿಕೆ ಮೇಲ್ವಿಚಾರಕ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಶಿವಯೋಗೆಪ್ಪ ಗೌಡ, ಸಹಾಯಕರಾಗಿ ಗ್ರಾಮ ಆಡಳಿತಾಧಿಕಾರಿಗಳಾದ ಹನುಮೇಶ, ಮಲ್ಲಿಕಾರ್ಜುನ, ಪ್ರದಸ ಬಸವರಾಜ ಬಸರಕೋಡ, ಚುನಾವಣಾ ಶಾಖೆಯ ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net