

ತಲ್ಲೂರ: ಗ್ರಾಮದ ಕಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ತಾಲೂಕು ಬಿಜೆಪಿ ಅಧ್ಯಕ್ಷ, ಸಹಕಾರಿ ಧುರೀಣ ವಿರೂಪಾಕ್ಷ ಮಾಮನಿ ಕೇಕ್ ಕತ್ತರಿಸುವ ಮೂಲಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದವರೊಂದಿಗೆ 60ನೇ ಜನ್ಮದಿನ ಆಚರಿಸಿಕೊಂಡರು.
ಯರಗಟ್ಟಿ ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ ವಿರೂಪಾಕ್ಷ ಮಾಮನಿ ಅವರನ್ನು ಸನ್ಮಾನಿಸಿ ಮಾತನಾಡಿ, ಸಮಾಜ ಸೇವಕ ವಿರೂಪಾಕ್ಷ ಮಾಮನಿ ಸರಳ
ಸಜ್ಜನ ವ್ಯಕ್ತಿ. ಅವರಿಂದ ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂದು ಆಶಿಸಿದರು.
ಜನ್ಮದಿನದ ಪ್ರಯುಕ್ತ ವಿರೂಪಾಕ್ಷ ಮಾಮನಿ ಹಾಗೂ ಅಭಿಮಾನಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು. ಪಿಕೆಪಿಎಸ್ ಅಧ್ಯಕ್ಷ ವಿನಯಕುಮಾರ ದೇಸಾಯಿ, ಮಹಾರುದ್ರಪ್ಪ ಉಪ್ಪಿನ, ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯ ಪುಂಡಲೀಕ ಮೇಟಿ,
ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಪಿಕೆಪಿಎಸ್ ಉಪಾಧ್ಯಕ್ಷ ವೀರಪ್ಪ ಬೆನಕಟ್ಟಿ, ಶಂಕರಗೌಡ ಪಾಟೀಲ, ಈರಣ್ಣ ಚಂದರಗಿ, ವೀರನಗೌಡ ಪಾಟೀಲ, ರಾಜು ಬಾರ್ಕಿ, ದುರ್ಗವ್ವ ಮಾದರ, ಗೌರವ್ವ ಮನ್ನಿಕೇರಿ,
ಮಹಾದೇವ ಮುರಗೋಡ, ಸಿದ್ದಪ್ಪ ಮುರಗೋಡ, ಕಿರಣ ಸರದಾರ ಇತರರಿದ್ದರು.