

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಇಲ್ಲಿಯ ಸ್ಟೇಷನ್ ರಸ್ತೆಯ ದಿಗಂಬರ ಜೈನ್ ಬೋರ್ಡಿಂಗ್‌ನಲ್ಲಿ ದಶಲಕ್ಷ ಪರ್ವದ ಸಂಯಮ ಧರ್ಮ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಅಯೋಗ್ಯರೆನಿಸಿಕೊಂಡವರು ಕೂಡ ಪೂಜ್ಯರ ಸನ್ನಿಧಿ ಸಂಧಿಸಿದ ಬಳಿಕ ಯೋಗ್ಯರಾಗಿದ್ದಾರೆ. ಮೋಕ್ಷದ ಮಾರ್ಗ ಕಂಡುಕೊಂಡಿದ್ದಾರೆ. ಹಾಗಾಗಿ ಧರ್ಮೋಪದೇಶ ಮಾಡಿ ಪುಣ್ಯ ಸಂಪಾದಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೋರ್ಡಿಂಗ್ ಕಾರ್ಯದರ್ಶಿ ದೇವೇಂದ್ರಪ್ಪ ಕಾಗೆನವರ ಅಧ್ಯಕ್ಷತೆ ವಹಿಸಿದ್ದರು.
ಧರ್ಮ, ತೀರ್ಥಂಕರರು ಮತ್ತು ಮುನಿಗಳ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸುಜಾತ ಗುಗ್ಗರಿ (ಪ್ರಥಮ), ವಿದ್ಯಾಧರ ಪಾಟೀಲ (ದ್ವಿತೀಯ) ಬಹುಮಾನ ಪಡೆದರು.
ಪ್ರಮುಖರಾದ ವಿದ್ಯಾಧರ ಪಾಟೀಲ, ಜಿ.ಜಿ. ಲೋಬುಗೋಳು, ಶಾಂತಿನಾಥ ಹೋತಪೇಟೆ, ಮಹಾವೀರ ದೊಡ್ಡಮನಿ, ಪ್ರಶಾಂತ ಬಿಶೆಟ್ಟಿ, ಭಾಗ್ಯಶ್ರೀ ಕಾಸಿನ, ಸ್ಮಿತಾ ವಾಕಳೆ, ಸುಭದ್ರಮ್ಮ ಮುತ್ತಿನ ಇತರರು ಇದ್ದರು. ಮಹಾವೀರ ಮಣ್ಕಟ್ಟಿ ನಿರೂಪಣೆ ಮಾಡಿದರು