ಆರೋಗ್ಯ ರಕ್ಷಣೆಯಲ್ಲಿ ಆಸ್ಪತ್ರೆ-ವೈದ್ಯರ ಪಾತ್ರ ಪ್ರಮುಖ

SANMANA
ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿಗೆ ನಾಮ ನಿರ್ದೇಶಿತರಾದ ಹನುಮೇಶ ವಾಲೇಕಾರ, ಶರಣಪ್ಪ ಸೋಮಸಾಗರ, ವೆಂಕೋಬ ಭೋವಿ, ಮರಿ ಗುಂಡಪ್ಪ ಕನ್ನೇರಮಡು, ಅಮರೇಶ ತೆಗ್ಗಿನಮನಿ ಅಧಿಕಾರ ಸ್ವೀಕರಿಸಿದರು. ಪಪಂ ಸದಸ್ಯರಾದ ಶರಣೇಗೌಡ, ರಾಜಾಸಾಬ ನಂದಾಪುರ, ಪ್ರಮುಖರಾದ ಹೊನ್ನೂರಸಾಬ ಉಪ್ಪು, ವಿರೂಪಾಕ್ಷಿ ಆಂಧ್ರ ಇತರರಿದ್ದರು.
Published on

ಕನಕಗಿರಿ: ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ವೈದ್ಯರು ಹಾಗೂ ಆಸ್ಪತ್ರೆಗಳ ಪಾತ್ರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಾ ಸಮಿತಿಗೆ ನಿರ್ದೇಶನಗೊಂಡವರು ವೈದ್ಯರು ಹಾಗೂ ಸಾರ್ವಜನಿಕರಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ರಕ್ಷಾ ಸಮಿತಿ ನಾಮ ನಿರ್ದೇಶಿತ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನಕಗಿರಿ ತಾಲೂಕು ಬಹುತೇಕ ಗ್ರಾಮೀಣ ಪ್ರದೇಶದಿಂದ ಕೂಡಿದ್ದು, ಬಡ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ದೂರದ ಗಂಗಾವತಿಗೆ ತೆರಳಿ ಸಾವಿರಾರೂ ಖರ್ಚು ಮಾಡಲು ತೊಂದರೆ ಅನುಭವಿಸುವ ಜನರಿಗೆ ಸರ್ಕಾರಿ ಆಸ್ಪತ್ರೆಗಳೇ ಜೀವದಾನ ನೀಡುತ್ತಿವೆ.
ಇಲ್ಲಿನ ಆಸ್ಪತ್ರೆಗೆ ವೈದ್ಯರ ಕೊರತೆ ಕಾಣುತ್ತಿದೆ. ಇರುವ ವೈದ್ಯರನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಚಿಕಿತ್ಸೆ ಕೊಡಿಸುವಲ್ಲಿ ಸದಸ್ಯರು ಶ್ರಮಿಸಬೇಕು ಎಂದರು.

ಸದಸ್ಯರಾದ ಹನುಮೇಶ ವಾಲೇಕಾರ, ಶರಣಪ್ಪ ಸೋಮಸಾಗರ, ವೆಂಕೋಬ ಭೋವಿ, ಮರಿ ಗುಂಡಪ್ಪ ಕನ್ನೇರಮಡು, ಅಮರೇಶ ತೆಗ್ಗಿನಮನಿ, ಅನುರಾಧರೆಡ್ಡಿ ಬೇರ‌್ಗಿ, ಶಾದೀಕ್ ಪಾಷಾ, ರಾಜೇಶ ಬೆಲ್ಲಂಕೊಂಡಿ ಪದಗ್ರಹಣ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪಪಂ ಸದಸ್ಯರಾದ ಶರಣೇಗೌಡ, ರಾಜಾಸಾಬ ನಂದಾಪುರ, ಪ್ರಮುಖರಾದ ಹೊನ್ನೂರಸಾಬ ಉಪ್ಪು, ಶಾಂತಪ್ಪ ಬಸರಿಗಿಡದ, ಟಿ.ಜೆ. ರಾಮಚಂದ್ರ, ಆಡಳಿತ ವೈದ್ಯಾಧಿಕಾರಿ ಸತೀಶ ಜೀರಾಳ ಇತರರಿದ್ದರು.

ಭೂ ನ್ಯಾಯ ಮಂಡಳಿ ಸಮಿತಿ:

ತಾಲೂಕು ಮಟ್ಟದ ಭೂ ನ್ಯಾಯ ಮಂಡಳಿಗೆ ಸರ್ಕಾರದಿಂದ ನಾಮ ನಿರ್ದೇಶಿತರಾದ ವಿರೂಪಾಕ್ಷಿ ಬೊಮ್ಮನಾಳ, ಚಿದಾನಂದಪ್ಪ ಭಜಂತ್ರಿ, ಬಸವರಾಜ ಬಂಕಾಪುರ, ಶರಣಬಸವರಾಜ ಇವರು ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

ಆರಾಧನಾ ಕಮಿಟಿ

ಕನಕಗಿರಿ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ಆಯ್ಕೆಯಾದ ಸತ್ಯಪ್ಪ ಭೋವಿ, ಮೌನೇಶ ವಿಶ್ವಕರ್ಮ ಹಿರೇಮಾದಿನಾಳ, ಮಲ್ಲಮ್ಮ ರಾಮನಗೌಡ ಆದಾಪುರ, ರಾಮಕೃಷ್ಣ ನಾಯಕ ಕನಕಗಿರಿ ಇವರು ತಹಸಿಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net