ವೀರೇಂದ್ರ ಹೆಗ್ಗಡೆ ಚಿಂತನೆ ರಾಷ್ಟ್ರವ್ಯಾಪಿ

7Kakamari1
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕಕಮರಿ: ಸಮಾಜದಲ್ಲಿ ಜಾಗೃತಿ ಮೂಡಿಸುವ ಮತ್ತು ಸರ್ವ ಧರ್ಮದ ಸಂದೇಶ ಸಾರುವ ಕಾರ್ಯವನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಮಾಡುತಿದ್ದು, ರಾಜ್ಯಸಭಾ ಸದಸ್ಯರಾಗುವ ಮೂಲಕ ಅವರ ಸೇವೆ, ಚಿಂತನೆ ರಾಷ್ಟ್ರವ್ಯಾಪಿಯಾಗಿದೆ ಎಂದು ಶ್ರೀಅಮ್ಮಾಜೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಗುರಪ್ಪ ದಾಶ್ಯಾಳ ಹೇಳಿದರು.

ಮದ ಶ್ರೀಅಮ್ಮಾಜೇಶ್ವರಿ ದೇವಸ್ಥಾನದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 2 ಲಕ್ಷ ರೂ. ಮಂಜೂರಾತಿ ಆದೇಶ ಪತ್ರ ಸ್ವೀಕರಿಸಿ ಮಾತನಾಡಿದರು.

ಅಥಣಿ ತಾಲೂಕು ಯೋಜನಾಧಿಕಾರಿ ರಜಬಅಲಿ ಮಾತನಾಡಿದರು. ಅಪ್ಪಾಸಾಬ ಈರಗೌಡ, ಲಕ್ಷ್ಮಣ ಗುರ್ಕಿ, ಅಣ್ಣಪ್ಪ ತಂಗಡಿ, ಸದಾಶಿವ ಬಿಳ್ಳೂರ, ಲಕ್ಷ್ಮಣ ಸಜ್ಜನ, ಸಿದ್ದಪ್ಪ ದಾಶ್ಯಾಳ, ಲಾಯಪ್ಪ ದಾಶ್ಯಾಳ, ಬುಜಪ್ಪ ಸವದತ್ತಿ, ಈರಣ್ಣ ಹೊನವಾಡ, ಭೀಮಪ್ಪ ಜನಗೌಡ, ಮಲ್ಲಿಕಾರ್ಜುನ ಸಿಂಧೂರ, ಅಶೋಕ ಅವಟಿ, ಮುತ್ತು ವಾಲಿ, ತೆಲಸಂಗ ವಲಯ ಮೇಲ್ವೀಚಾರಕ ಪಿ.ಎಮ್.ಮಹಾಂತೇಶ ಸೇವಾ ಪ್ರತಿನಿಧಿ ಚನ್ನಪ್ಪ ಜನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net