ವಚನ ಅಧ್ಯಯನದಿಂದ ವಿರಾಟ್ ದರ್ಶನ: ಉಪನ್ಯಾಸಕಿ ಶೋಭಾ ಆನಂದ

15
Published on

ಮೈಸೂರು: ವಚನಗಳು ಮೇಲ್ನೋಟಕ್ಕೆ ಸರಳ ಎನಿಸಿದರು, ಆಳವಾದ ಅಧ್ಯಯನ ಮತ್ತು ಅನುಭವದಿಂದ ವಿರಾಟ್ ದರ್ಶನ ನಮಗಾಗುತ್ತದೆ ಎಂದು ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶೋಭಾ ಆನಂದ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆಯಿಂದ ರಾಮಕೃಷ್ಣನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವಚನ-ಶ್ರಾವಣ’ ಮನೆ ಮನೆಗೆ ಶರಣ ಸಂದೇಶ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಚನ ಎಂಬುದು ಅಮೃತ ಇದ್ದಂತೆ. ಯಾರು ಯಾವ ರೀತಿಯಲ್ಲಿ ಸದ್ವಿಚಾರಗಳನ್ನು ಮಾಡುವವರು ಅವರಿಗೆ ಅದನ್ನೇ ಕೊಡುವಂತಹ ವೈಚಾರಿಕ ಅಂಶಗಳು ಅವುಗಳಲ್ಲಿವೆ. ಸರ್ವರಿಗೂ ಸಲ್ಲುವ ಸಾರ್ವಕಾಲಿಕ ಸತ್ಯ ಮತ್ತು ಬೆಳಕು ವಚನದಲ್ಲಿರುವುದು ಅದಕ್ಕೆ ಕಾರಣ ಎಂದರು.
ವಚನಗಳು ಸಮುದ್ರವಿದ್ದಂತೆ. ಎಷ್ಟು ಮೊಗೆದರೂ ಅಷ್ಟು ಅವರಿಗೆ ಲಭಿಸುತ್ತದೆ. ಕಾರ್ಯಸಾಧನೆಗೆ ಶ್ರದ್ಧೆ, ತಾಳ್ಮೆ, ಶಕ್ತಿ ಮುಖ್ಯ. ಇಲ್ಲದೆ ಹೋದರೆ ಶಿವತ್ವವನ್ನು ಪಡೆಯಲು ಸಾಧ್ಯವಿಲ್ಲ . ಇರುವುದನ್ನು ಬಿಟ್ಟು ಇರದೆ ಇರುವುದರ ಕಡೆಗೆ ಮನುಷ್ಯ ಹೇಗೆ ಸದಾ ಅಪವಿಸುತ್ತಾನೋ ಅದರಿಂದ ಕಣ್ಣಿಗೆ ಕಾಣದ್ದು ಸಿಗದೇ ಸೋಲುತ್ತಾನೆ. ಕಣ್ಣಿಗೆ ಕಾಣುವುದನ್ನು ಪಂಚೇಂದ್ರಿಯಗಳನ್ನು ಪ್ರೀತಿ ನಿಷ್ಠೆ ಶ್ರದ್ಧೆ ಛಲಗಳಿಂದ ಪಾರಮಾರ್ಥಿಕ ಮತ್ತು ಲೌಕಿಕ ಸಾಧನೆ ಇರಬಹುದು ಎಂದು ಹೇಳಿದರು
ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕರಾದ ರೇಖಾ ಮತ್ತು ಮಹದೇವಸ್ವಾಮಿ, ಮುಖಂಡರಾದ ಲೋಕೇಶಪ್ಪ, ಶ್ರೀಕಂಠಯ್ಯ, ಮೃತ್ಯುಂಜಯ, ಶೋಭಾ ನಟೇಶ್, ಡಾ.ಯಮುನಾ, ಪ್ರಜ್ವಲ್, ಇಂದಿರಾ ಜಗದೀಶ್, ನಂದೀಶ್, ಸುದರ್ಶನ, ಚಂದ್ರಪ್ಪ, ಪ್ರೇಮಾ ಮಹೇಶ್, ಕುಮಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net