

ಚಳ್ಳಕೆರೆ: ಸಾಮಾಜಿಕವಾಗಿ ನಡೆಯುವ ಧಾರ್ಮಿಕ ಉತ್ಸವಗಳಲ್ಲಿ ಸರ್ವರ ಸಹಭಾಗಿತ್ವ ಇರಬೇಕು ಎಂದು ವೀರಶೈವ ಸೇವಾ ಸಮಾಜದ ಕಾರ್ಯದರ್ಶಿ ಹೊಸಮನೆ ಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಅದ್ದೂರಿಯಾಗಿ ನಡೆದ ಹಿಂದೂ ಮಹಾಗಣಪತಿಯ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ವೀರಶೈವ ಸೇವಾ ಸಮಾಜದಿಂದ ಪ್ರಸಾದ ವಿತರಿಸಿ ಮಾತನಾಡಿ, ಇಲ್ಲಿ ನೂರಾರು ವರ್ಷಗಳಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಆಚರಣೆ ಮಾಡಲಾಗುತ್ತಿದೆ ಎಂದರು.
ವಿಸರ್ಜನೆ ಕಾರ್ಯಕ್ರಮಕ್ಕೆ ಕಳೆದ ಮೂರು ವರ್ಷಗಳಿಂದ ಸಮಾಜದಿಂದ ಪ್ರಸಾದ ವ್ಯವಸ್ಥೆ ಮಾಡಿ ವ್ಯವಸ್ಥಿತವಾಗಿ ಭಕ್ತರಿಗೆ ಹಂಚಲಾಗುತ್ತಿದೆ.
ನಗರದಲ್ಲಿನ ಗಣೇಶನ ಉತ್ಸವಗಳು ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಸಂಬಂಧ ಬೆಸೆಯುವ ರೀತಿಯಲ್ಲಿ ಆಚರಿಸುತ್ತಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.
ತಾಲೂಕಿನ ವೀರಶೈವ ಸೇವಾ ಸಮಾಜದ ಪದಾಧಿಕಾರಿಗಳಾದ ಪಿ.ಜಗದೀಶ, ಮುಸ್ಟಲಗುಮ್ಮಿ ಜಗದೀಶ್, ಲೋಕೇಶ್, ಕೆ.ಎಂ. ಜಗದೀಶ್, ವಿಜಯೇಂದ್ರ, ನಿಡಗಲ್ಲು ಶಂಕರ್, ಎಚ್.ತಿಪ್ಪೇಸ್ವಾಮಿ ಇತರರಿದ್ದರು.