ವಿರಕ್ತಮಠಗಳು ಸಾರ್ವಜನಿಕರ ಸ್ವತ್ತು

14
ಹುಲ್ಲೂರ, ಮಹಾಂತೇಶ ಹೂಗಾರ, ಈರಣ್ಣ ಹೂಗಾರ ಇತರಿದ್ದರು. ರವಿ ಜಾಲಪ್ಪನವರ ರೂಪಿಸಿದರು. ಹೊಸಕೇರಿ-ಬಸವ ನಗರದ ಬಸವೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮವನ್ನು ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಉದ್ಘಾಟಿಸಿದರು. ಶಂಕ್ರವ್ವ ತಳವಾರ, ಬಸವಕುಮಾರ ಶಾಸಿಗಳು ಇತರರು ಇದ್ದರು.
Published on

ರಾಮದುರ್ಗ: ಜಗಜ್ಯೋತಿ ಬಸವೇಶ್ವರರ ತತ್ತ್ವ ಪಾಲಿಸಿದ ಲಹಾರ ಶಿವಯೋಗಿಗಳು ಹೊಸಕೇರಿ ತಪೋಭೂಮಿಯಲ್ಲಿ ತಪಸ್ಸು ಮಾಡಿದ ಪ್ರತಿಲವಾಗಿ ಮುಂಬರುವ ದಿನಗಳಲ್ಲಿ ಹೊಸಕೇರಿ-ಬಸವ ನಗರ ಜಾಗೃತ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಹೇಳಿದರು.

ತಾಲೂಕಿನ ಹೊಸಕೇರಿ-ಬಸವ ನಗರದಲ್ಲಿ ಶನಿವಾರ ಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಮಿಟಿ, ಶ್ರೀ ಕೋರಣೇಶ್ವರ ಮಠದ ಭಕ್ತರ ನೇತೃತ್ವದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜ.13ರಿಂದ 15ರ ವರೆಗೆ ಏರ್ಪಡಿಸಿದ್ದ ಬಸವಧರ್ಮ ದರ್ಶನ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ವಿರಕ್ತಮಠಗಳು ಸಾರ್ವಜನಿಕ ಸ್ವತ್ತಾಗಬೇಕು. ಹೊರತು ವೈಯಕ್ತಿಕ ಆಸ್ತಿ ಆಗಬಾರದು. ಅದನ್ನು ವಿರಕ್ತ ಮಠಾಧಿಪತಿಗಳು ಅರಿತುಕೊಂಡು ನಡೆಯಬೇಕಿದೆ ಎಂದರು. ನೀಲಲೋಚನ ತಾಯಿ ಆಶೀರ್ವಚನ ನೀಡಿದರು.

ವೇದಮೂರ್ತಿ ಬಸವಕುಮಾರ ಶಾಸಿಗಳು ಪ್ರವಚನ ನೀಡಿದರು. ಪತ್ರಕರ್ತ ಗೌಡಪ್ಪಗೌಡ ಪಾಟೀಲ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ಶಿವಪ್ಪ ಕಿತ್ತಲಿ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಂಕ್ರವ್ವ ತಳವಾರ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಪ್ರಕಾಶ ತಳವಾರ, ಉಮೇಶ ಕನಕನ್ನವರ, ವೇದಮೂರ್ತಿ ಮಹಾಲಿಂಗಯ್ಯ ಹಿರೇಮಠ, ಸಂಗಪ್ಪ ಕಿತ್ತಲಿ, ಬಸಪ್ಪ ಗಾಡದ, ಉಮೇಶ ಕನಕನ್ನವರ, ಈರಪ್ಪ ಮಲಕನ್ನವರ, ಬಾಲಪ್ಪ ಕನಕನ್ನವರ, ಹುಸೇನಸಾಬ ಖಾಕಂಡಕಿ, ನಿಂಗಪ್ಪ ಕಿತ್ತಲಿ, ದೊಡ್ಡನಿಂಗಪ್ಪ ತಳವಾರ, ಶಂಕರ ಅಂಗಡಿ, ಪ್ರತಾಪ ಕನಕನ್ನವರ, ಬಾಲಪ್ಪ ಕನಕನ್ನವರ, ಬಸವರಾಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net