ವಿರಾಜಪೇಟೆಯ ಜೈ ಭಾರತ್ ತಂಡ ಚಾಂಪಿಯನ್

ವಿರಾಜಪೇಟೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಟ್ರೋಫಿ ಪಡೆದ ಜೈ ಭಾರತ್ ತಂಡ.
ವಿರಾಜಪೇಟೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಟ್ರೋಫಿ ಪಡೆದ ಜೈ ಭಾರತ್ ತಂಡ.
Published on

ಸಿದ್ದಾಪುರ: ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ವಿರಾಜಪೇಟೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ನಲ್ಲಿ ವಿರಾಜಪೇಟೆಯ ಜೈ ಭಾರತ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಮ್ಮತ್ತಿಯ ತ್ರಿವೀಲ್ ಕ್ರಿಕೆಟರ್ಸ್ ಆಶ್ರಯದಲ್ಲಿ ನೆಲ್ಲಮಕ್ಕಡ ಸಜಿ ನಾಣಯ್ಯ ಜ್ಞಾಪಕಾರ್ಥವಾಗಿ ಆಟೋ ಚಾಲಕರಿಗೆ 4ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಭಾನುವಾರ ನಡೆಯಿತು. ಸಿದ್ದಾಪುರದ ಫ್ರೆಂಡ್ಸ್ ಇಲೆವೆನ್ ತಂಡವನ್ನು ಜೈ ಭಾರತ್ ತಂಡ ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯದಲ್ಲಿ ಸುತ್ತಮುತ್ತಲಿನ 12 ತಂಡಗಳು ಭಾಗಿಯಾಗಿದ್ದವು. ಸಮಾರೋಪ ಸಮಾರಂಭದಲ್ಲಿ ತ್ರಿವೀಲ್ ಕ್ರಿಕೆಟರ್ಸ್‌ನ ಅಧ್ಯಕ್ಷ ಮಹೇಶ್, ಕಾಫಿ ಬೆಳೆಗಾರ ಕುಟ್ಟಂಡ ಫ್ರಿನ್ಸ್ ಗಣಪತಿ, ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಅಭಿಜಿತ್, ಉಸ್ತಾದ್ ಬಶೀರ್ ಅಹ್ಮದ್, ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ವಿಜು ಸುಬ್ರಮಣಿ, ಹಿರಿಯ ಆಟೋ ಚಾಲಕ ಡೇವಿಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net