

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಕರ್ನಾಟಕ ಸರ್ವೋದಯ ಪಕ್ಷ ಅಭ್ಯರ್ಥಿಯಾಗಿ ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಪರ ರೈತ ಬ್ರಾೃಂಡ್ ಪ್ರಚಾರ ಪ್ರಾರಂಭವಾಗಿದೆ.
ಪೊನ್ನಣ್ಣ ರೈತ ಪರ ಕಾಳಜಿ ಹೊಂದಿದ್ದಾರೆಂದು ಹಸಿರು ಬಣ್ಣದ ಪೋಸ್ಟರ್ ಸಿದ್ಧ ಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡ ಲಾಗುತ್ತಿದೆ. ಇಷ್ಟು ದಿನ ರೈತ ಪರ ಕಾಳಜಿ ಎಲ್ಲಿತ್ತೆಂದು ಮನು ಸೋಮಯ್ಯ ಪರ ಇರುವವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿ
ದ್ದಾರೆ.
ಮನು ಸೋಮಯ್ಯ, ಎ.ಎಸ್. ಪೊನ್ನಣ್ಣ ಕೊಡವ ಜನಾಂಗದವರಾಗಿದ್ದು, ಕೊಡವ ಮತ ವಿಭಜನೆಯಾಗುವ ಆತಂಕವೂ ಮೂಡಿದೆ. ಮನು ಸೋಮಯ್ಯ ನೇತೃತ್ವದ ರೈತ ಸಂಘದ ಚಟುವಟಿಕೆಯಲ್ಲಿ ಬಿಜೆಪಿ ಮುಖಂಡರು- ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುವ ಆತಂಕ ಇದೆ. ಕಾಂಗ್ರೆಸ್- ಬಿಜೆಪಿ ಪಕ್ಷಕ್ಕೆ ಒಂದಿಷ್ಟು ಪೆಟ್ಟುಬೀಳುವ ಲೆಕ್ಕಚಾರ ನಡೆದಿದೆ.
೨೦೨೩ ಪೊನ್ನಣ್ಣ ಪರ್ವ. ಕೊಡಗಿನ ರೈತರ ಮೇಲೆ ಸರ್ಕಾರ ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ರೈತರನ್ನು ಕಳ್ಳರಂತೆ ಬಿಂಬಿಸಿದಂತಹ ಪ್ರಕರಣದಲ್ಲಿ ಕಾನೂನು ರಕ್ಷಣೆ ನೀಡಿದ ನಿಜವಾದ ರೈತ ಪರ ನಾಯಕ ಎ.ಎಸ್. ಪೊನ್ನಣ್ಣ. ಉಚಿತ ಕಾನೂನು ನೆರವು ನೀಡಿದ ನಮ್ಮ ಪೊನ್ನಣ್ಣ, ನಮ್ಮ ಆಯ್ಕೆ. ಕೇವಲ ಪ್ರತಿಭಟನೆಯಲ್ಲ. ನಿಜವಾದ ರಕ್ಷಣೆ. ಈ ಬಾರಿ ಪೊನ್ನಣ್ಣ ಎಂದು ಪೊನ್ನಣ್ಣ ಪರ ಪ್ರಚಾರ ನಡೆಸಲಾಗುತ್ತಿದೆ.
ಬಡ ರೈತ ಆನೆ ದಾಳಿಯಿಂದ ಮೃತಪಟ್ಟಾಗ, ರೈತ ಹುಲಿ ಬಾಯಿಗೆ ಸಿಕ್ಕಿ ಆಹಾರವಾದಾಗ, ರೈತರ ಹಸು, ದನಕರುಗಳು ಪ್ರಾಣ ಬಿಟ್ಟಾಗ, ವನ್ಯಪ್ರಾಣಿಗಳಿಂದ ಬೆಳೆ ಕಳೆದುಕೊಂಡಾಗ, ಕೊಡಗಿನ ವಿದ್ಯುತ್ ಸಮಸ್ಯೆ, ಕಂದಾಯ ಇಲಾಖೆಯ ಸಮಸ್ಯೆ, ಬ್ಯಾಂಕ್ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ, ನ್ಯಾಯ ಕೊಡಿಸಿದ್ದು ಯಾರು. ನಿಜವಾದ ರೈತ ನಾಯಕ ಮನು ಸೋಮಯ್ಯ ಎಂದು ಅವರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ.
ಮನು ಸೋಮಯ್ಯ ಪರ ಬ್ಯಾಟಿಂಗ್
ಐದು ವರ್ಷ ಮುಂಚೆ ರೈತರು ತಮ್ಮ ಭೂಮಿ ರಕ್ಷಿಸಿಕೊಳ್ಳಲು, ರೈತರ ನೆರವಿಗೆ ಆ ಕ್ಷಣಕ್ಕೆ ಧಾವಿಸಿ ಬಂದವರು ಯಾರು. ಸರ್ವೇ ಇಲಾಖೆಯವರನ್ನು ವಾಪಸ್ಸು ಕಳಿಸಿದವರು ಯಾರು. ರೈತ ಸಂಘದವರು ಹಾಗೂ ಕಾಡ್ಯಮಾಡ ಮನು ಸೋಮಯ್ಯ ಎಂದು ಹೇಳುವುದರ ಮೂಲಕ ಮನು ಸೋಮಯ್ಯ ಪರ ಬ್ಯಾಟಿಂಗ್ ಮಾಡಲಾಗುತ್ತಿದೆ.
ರೈತ ಸಂಘದ ಹೆಸರು ಹೇಳಿಕೊಂಡು ಭೂಮಿ ಉಳಿಸಿಕೊಂಡವರು, ತಮ್ಮ ಎಲ್ಲಾ ಕೆಲಸ ಮಾಡಿಸಿಕೊಂಡವರು ಮನು ಸೋಮಯ್ಯ ನವರನ್ನು ಮರೆಯುವುದಿಲ್ಲ. ಪೊನ್ನಣ್ಣನವರು ದಿಢೀರ್ ಅಂತ ಯಾವಾಗ ರೈತನಾಯಕರಾದರು. ೧೦ ವರ್ಷದಿಂದ ರೈತರಿಗಾಗಿ ಜೇಬಿ ನಿಂದ ಹಣ ಕಳೆದುಕೊಂಡು, ಬೀದಿಯಲ್ಲಿ ಕೂತು, ಬಿಸಿಲಲ್ಲಿ ಒಣಗಿ, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ರೈತರ ನೆರವಿಗೆ ಅವರು ಫೋನ್ ಮಾಡಿದ ಅರ್ಧ ಗಂಟೆಯಲ್ಲಿ ತಲುಪಿ, ಅವರ ರಕ್ಷಣೆಗಾಗಿ ಜೀವಪಣಕ್ಕಿಟ್ಟು, ಹೋರಾಡಿ.., ಪೊಲೀಸ್, ಕೋರ್ಟ್ ಎಂದು ಅಲೆದು, ಅಲೆದು ತಮ್ಮ ಹಣ, ವೈಯಕ್ತಿಕ ಜೀವನ ಕಳೆದುಕೊಂಡ ಕಾಡ್ಯಮಾಡ ಮನು ಸೋಮಯ್ಯನವರು ಏನೆಂದು ಪ್ರಶ್ನಿಸಿದ್ದಾರೆ.
**
ಮನು ಸೋಮಯ್ಯ ಸ್ಪರ್ಧೆ ಕಾಂಗ್ರೆಸ್ ಮೇಲೆ ಯಾವ ಪರಿಣಾಮವೂ ಬಿರುವುದಿಲ್ಲ. ನರೇಂದ್ರ ಮೋದಿ ರೀತಿ ಮನು ಸೋಮಯ್ಯ ಹಗಲುರಾತ್ರಿ ಕೆಲಸ ಮಾಡುತ್ತಿದ್ದಾರೆಂದು ಅವರ ಬೆಂಬಲಿಗರು ಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಮೋದಿ ಮಾದರಿ ಎಂದು ಗೊತ್ತಾಗುತ್ತದೆ. ಕಾನೂನು ತಜ್ಞ ಎ.ಎಸ್. ಪೊನ್ನಣ್ಣ ಕೊಡಗಿನ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಅದಕ್ಕಾಗಿ ಜನಬೆಂಬಲ ವ್ಯಕ್ತವಾಗುತ್ತಿದೆ. ನೆರವಂಡ ಉಮೇಶ್, ವಕ್ತಾರು, ಕಾಂಗ್ರೆಸ್.
**
ಎಷ್ಟೋ ವರ್ಷ ಆದ ಮೇಲೆ, ಚುನಾವಣೆ ದೃಷ್ಠಿಯಿಂದ ರೈತರ ಪರ ಕಾನೂನು ರಕ್ಷಣೆ ಮಾಡಲು ಇವರೇ ಬೇಕಿರಲಿಲ್ಲ. ಕೊಡಗಿನಲ್ಲಿ, ಕರ್ನಾಟಕದಲ್ಲಿ ಘಟಾನುಘಟಿ ವಕೀಲರಿದ್ದರು. ಇವರು ಮುಂದೆ ಚುನಾವಣೆಯಲ್ಲಿ ನಿಲ್ಲೋದಕ್ಕಾಗಿ ಫ್ರೀ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಚೆಟ್ಟಂಗಡ ಕಂಬ ಕಾರ್ಯಪ್ಪ, ಅಧ್ಯಕ್ಷ, ಶ್ರೀಮಂಗಲ ಹೋಬಳಿ ರೈತ ಸಂಘ.