

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಗೌಳಿ ಜನಾಂಗದ ಆರಾಧ್ಯ ದೈವ ಎಂದೆ ಪ್ರಸಿದ್ಧಿ ಹೊಂದಿರುವ ವಿರಾಜಪೇಟೆ ಕಂಚಿಕಾಮಕ್ಷಿ ದೇವಾಲಯಕ್ಕೆ ೩ ಶತಮಾನಗಳ ಇತಿಹಾಸವಿದೆ. ವಿರಾಜಪೇಟೆ- ತಲಚೇರಿ ಅಂತರ್ ರಾಜ್ಯ ಹೆದ್ದಾರಿ ಬದಿಯ ಮೀನುಪೇಟೆಯಲ್ಲಿ ದೇವಾಲಯವಿದೆ. ಪ್ರತಿ ಶುಕ್ರವಾರ ಪೂಜೆ, ಪುನಸ್ಕಾರ ನಡೆಯುತ್ತದೆ.
ಯಾದವ ವಂಶಕ್ಕೆ ಸೇರಿದ ಗೌಳಿ ಜನಾಂಗ ಆಂಧ್ರಪ್ರದೇಶ ಮೂಲದವರಾಗಿದ್ದು, ಜಾನುವಾರು ಸಾಕಾಣೆ ಮತ್ತು ಹಾಲು ವ್ಯಾಪಾರ ಕುಲ ಕಸುಬಾಗಿದೆ. ಮೂಲ ದಾಖಲಾತಿ ಪ್ರಕಾರ ಆಂಧ್ರಪ್ರದೇಶದ ಪಳನಿಯಿಂದ ಗೌಳಿ ಜನಾಂಗದವರು ಬರುವಾಗ ಕಂಚಿ ಕಾಮಾಕ್ಷಿ ಹಾಗೂ ಮಾರಿಯಮ್ಮ ದೇವರನ್ನು ಜತೆಯಲ್ಲಿ ಕರೆತಂದು ಮೀನುಪೇಟೆಯ (ಹಿಂದೆ ಗೌಳೀಬೀದಿ) ಒಂದು ಹಲಸಿನ ಮರದ ಕೆಳಗೆ ಪ್ರತಿಷ್ಠಾಪಿಸಿ ಪೂಜಾ ಕೈಕಂರ್ಯ ಮಾಡುತ್ತಿದ್ದರು. ತದನಂತರ ಪೂರ್ವಜರು ಪಕ್ಕದಲ್ಲಿಯೆ ಸೂಕ್ತ ಸ್ಥಳದಲ್ಲಿ ೧೩ ಸೆಂಟ್ ಖರೀದಿಸಿ ಪುಟ್ಟದಾದ ದೇವಾಲಯ ನಿರ್ಮಿಸಿದ್ದರು. ಪ್ರಸ್ತುತ ದೊಡ್ಡ ದೇವಾಲಯ ಆಗಿದೆ.
ಗೌಳಿ ಜನಾಂಗದಲ್ಲಿ ೨ ಪಂಗಡಗಳಿವೆ. ವಂಗರೆ ಮತ್ತು ವಮ್ಮ. ವಂಗರೆ ಅಂದರೆ ಅಣ್ಣತಮ್ಮಂದಿರು. ವಮ್ಮ ಅಂದರೆ ಕೊಟ್ಟು ತಗೋಳುವುದು (ಮದುವೆ ಸಂದರ್ಭ). ಕಂಚಿ ಕಾಮಾಕ್ಷಿ ಹಾಗೂ ಮಾರಿಯಮ್ಮ ದೇವರು ಅಕ್ಕತಂಗಿಯರಾಗಿದ್ದಾರೆ. ಕಾಮಾಕ್ಷಿ ದೇವರು ಸಸ್ಯಹಾರಿಯಾಗಿ ದ್ದು, ಮಾರಿಯಮ್ಮ ದೇವರು ಮಾಂಸಹಾರಿಯಾಗಿದ್ದಾರೆ. ತೆಲುಗರ ಬೀದಿಯ ಮಾರಿಯಮ್ಮ ದೇವರ ಹಬ್ಬ ಕಳೆದ ನಂತರ ಮೇ ೨ನೇ ವಾರ ದ ಮಂಗಳವಾರ, ಬುಧವಾರ, ಗುರುವಾರ ವಾರ್ಷಿಕ ಹಬ್ಬ ನಡೆಯಲಿದೆ.
ಮಂಗಳವಾರ ಕಂಚಿ ಕಾಮಾಕ್ಷಿ ದೇವರಿಗೆ ಹಣ್ಣು ಹಂಪಲು ನೈವೇದ್ಯ ಪೂಜೆ ಸಲ್ಲಿಸಿ, ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯ ಲಿದೆ. ಬುಧವಾರ ಮಾರಿಯಮ್ಮ ದೇವರಿಗೆ ಇಷ್ಟವಾದ ತಂಬಿಟ್ಟು ದೀಪ, ಬೆಲ್ಲದ ಪಾನಕ, ಬೇನ ಸೊಪ್ಪಿನ ಟ್ಟಿನ ಪ್ರಸಾದ ಸಮರ್ಪಿಸಲಾಗು ತ್ತದೆ. ಗುರುವಾರ ಪೂರ್ವಹ್ನ ಜನರಿಗೆ ಯಾವುದೇ ಮಾರಕ ರೋಗ ರುಜಿನ ಬಾರದ ರೀತಿ ದೇವರಿಗೆ ಹರಸಿನ ನೀರಿನಲ್ಲಿ ಅವಮೃತ ಜಳಕ ಮಾಡಿಸಿ ದೇವರ ಪ್ರಸಾದವನ್ನು ಮೂಲಂಗಾಡು ಎಂಬ ಜಾಗದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಮಾರಿಯಮ್ಮ ದೇವರು ಉಗ್ರ ಸ್ವರೂಪಿಣಿ ಯಾದ ಕಾರಣ ಯಾವುದೇ ಮಾರಕ ರೋಗ ರುಜಿನಿ ಬಾರದ ರೀತಿ ತಡೆಯತ್ತಾರೆ. ಕಾಮಾಕ್ಷಿ ದೇವರು ಮದುವೇ ಆಗದ ಹೆಣ್ಣು ಮಕ್ಕಳಿಗೆ ಮಾಂಗಲ್ಯ ಭಾಗ್ಯ ಕರುಣಿಸುವ ದೇವರಾಗಿದ್ದಾರೆ.
ಬ್ರಾಹ್ಮಣ ಪೌರೋತ್ಯ ಇಲ್ಲದ ಕಾರಣ ವಾರ್ಷಿಕ ಹಬ್ಬದಲ್ಲಿ ಗೌಳಿ ಜನಾಂಗದ ಪೂಜಾರಿಗಳು ಶುದ್ದ, ಮುದ್ರಿಕೆಯಲ್ಲಿ ಇದ್ದು ಕರಗ ಹಾಗೂ ಪೂಜಾ ಕೈಕಂರ್ಯ ನೇರವೇರಿಸುತ್ತಾರೆ. ಹಬ್ಬದ ಬಹುತೇಕ ಖರ್ಚು ವೆಚ್ಚಗಳು ಭಕ್ತಾಧಿಗಳಿಂದ ದಾನ ಹಾಗೂ ಹರಕೆ ರೂಪದಲ್ಲಿ ಬರುತ್ತದೆ. ಶಿವರಾತ್ರಿ, ಯುಗಾದಿ, ಸುಬ್ರಮಣ್ಯ ಸೃಷ್ಠಿ, ನಾಗರ ಪಂಮಿ, ನವರಾತ್ರಿಗಳಲ್ಲಿ ವಿಶೇಷ ಪೂಜಾ ಕೈಕರ್ಯ ನಡೆಸಲಾಗುತ್ತದೆ. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.
ಜಿಲ್ಲೆಯಲ್ಲಿ ೨ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ತೆಲುಗು ಮಾತೃ ಭಾಷೆಯಾಗಿದೆ. ನೂರಾರು ವರ್ಷಗಳ ಹಿಂದೆ ಗೌಳಿ ಜಾನಂಗ ಮೊದಲು ವಿರಾಜಪೇಟೆಗೆ ಆಗಮಿಸಿದ್ದು, ಮಾರಕ ಸಿಡುಬು ರೋಗ ಕಾಣಸಿಕೊಂಡ ಹಿನ್ನಲೆಯಲ್ಲಿ ಎಲ್ಲಾರ ಛಿದ್ರ ಛಿದ್ರವಾಗಿ ಗುಳೆ ಹೋಗಿ ಕೇವಲ ಕುಟುಂಬಗಳು ಮಾತ್ರ ವಿರಾಜಪೇಟೆಯಲ್ಲಿ ಉಳಿದುಕೊಂಡಿವೆ.
ಪ್ರತಿ ಶುಕ್ರವಾರ ದೇವಾಲಯದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ಉಳಿದ ದಿನ ಭಕ್ತರು ದೀಪ ಹಚ್ಚಿ ಹೋಗುತ್ತಾರೆ. ಶಕ್ತಿ ದೇವತೆ ಆದ ಕಾರಣ ನಿತ್ಯ ಪೂಜೆ ಮಾಡಲು ಪ್ರಾರಂಭಿಸಿದರೆ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ದೇವಾಲಯದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಿಕೊಳ್ಳಬಹುದೆಂದು ಅರ್ಚಕರಾದ ಮೋಹನ್ ಹೇಳುತ್ತಾರೆ.
**
ಪ್ರತಿದಿನ ದೇವಾಲಯಲಕ್ಕೆ ಬಂದು ದೀಪ ಹಚ್ಚಿ ಪ್ರಾರ್ಥಿಸುತ್ತೇನೆ. ಶಾಂತ ಸ್ವರೂಪಿಣಿ ಆದ ಕಂಚಿ ಕಾಮಾಕ್ಷಿ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥ ಸೇವೆ ನೆರವೇರುತ್ತದೆ. ಅನ್ಯ ಧರ್ಮದವರು ಕೂಡ ಇಲ್ಲಿ ಪೂಜೆ ಸಲ್ಲಿಸುವುದು ವಿಶೇಷ. ದೇವರಿಗೆ ಶಕ್ತಿ ಇರುವುದಕ್ಕೆ ದೇವಾಲಯ ಬೃಹದಾಕಾರದಲ್ಲಿ ಬೆಳೆಯಲು ಸಹಕಾರಿಯಾಗಿದೆ. ಜಿ.ಎ. ಗಣೇಶ್, ಭಕ್ತರು, ವಿರಾಜಪೇಟೆ.
ಹದಿಮೂರು ಸೆಂಟ್ ಜಾಗದಲ್ಲಿ ದೇವಾಲಯವಿದೆ. ಕೇವಲ ೫ ಕುಟುಂಬ ಮಾತ್ರ ದೇವಾಲಯದ ನಿರ್ವಹಣೆ ನಡೆಸುತ್ತಿದೆ. ಸರ್ಕಾರದಿಂದ ಈ ಹಿಂದೆ ಕೇವಲ ೨ ಲಕ್ಷ ರೂಪಾಯಿ ಸಿಕ್ಕಿದೆ. ಭೋಜನಾಲಯ, ಸಭಾಂಗಣ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಅನುಭವ ಮಂಟಪ, ಆವರಣಕ್ಕೆ ನೆಲಹಾಸು ಇತ್ಯಾದಿ ಕೆಲಸ ಬಾಕಿ ಉಳಿದಿವೆ. ಸರ್ಕಾರ ಹಾಗೂ ದಾನಿಗಳು ಸಹಾಯ ನಿರೀಕ್ಷಿಸಲಾಗುತ್ತಿದೆ. ಜಿ.ಜಿ. ಮೋಹನ್, ಅಧ್ಯಕ್ಷರು, ಕಂಚಿ ಕಾಮಾಕ್ಷಿ ದೇವಾಲಯ, ವಿರಾಜಪೇಟೆ.