

ಸುಂಟಿಕೊಪ್ಪ: ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಎ ಮತ್ತು ಬಿ ತಂಡಗಳ ನಡುವೆ ಶನಿವಾರ ನಡೆದ ಮೊದಲ ಪಂದ್ಯಾವಳಿಯಲ್ಲಿ ವಿರಾಜಪೇಟೆ ಎ ತಂಡ ಮೊದಲು ಬ್ಯಾಟಿಂಗ್ ನಡೆಸಿ 68 ರನ್ ಗಳಿಸಿದರೆ, ಬಿ ತಂಡ 12 ರನ್‌ಗೆ ನಿಯಂತ್ರಿಸಿ ವಿರಾಜಪೇಟೆ ಎ ತಂಡ ಗೆದ್ದುಕೊಂಡಿತು.
ಎರಡನೇ ಪಂದ್ಯಾವಳಿಯು ಹಟ್ಟಿಹೊಳೆ ನಿರ್ಮಲಾ ಮಾತೆ ದೇವಾಲಯ ತಂಡ ಹಾಗೂ ಮಡಿಕೇರಿಯ ಸಂತ ಮೈಕಲರ ದೇವಾಲಯ ತಂಡಗಳ ನಡುವೆ ನಡೆದು ಸಂತ ಮೈಕಲರ ತಂಡ ಮೊದಲ ಬ್ಯಾಟಿಂಗ್ ನಡೆಸಿ 80 ರನ್ ಗಳಿಸಿದರೆ, ಬೆನ್ನುಹತ್ತಿದ ಹಟ್ಟಿಹೊಳೆ ತಂಡ 21ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
ಮೂರನೇ ಪಂದ್ಯಾವಳಿಯು ಸಂತ ಮೇರಿ ದೇವಾಲಯ ತಂಡ ಸಿದ್ದಾಪುರ ಹಾಗೂ ಸಿದ್ದಾಪುರ ಸಂತ ಜೋಸೆಫರ ದೇವಾಲಯ ತಂಡಗಳ ನಡುವೆ ನಡೆದು ಸಂತ ಮೇರಿ 51 ರನ್ ಗಳನ್ನು ಗಳಿಸಿದರೆ ಎದುರಾಳಿ ಜೋಸೆಫ್ ತಂಡವು ಕೇವಲ 30 ರನ್ ಗಳನ್ನು ಮಾತ್ರಗಳಿಸುವ ಮೂಲಕ ಎದುರಾಳಿ ಸಂತ ಮೇರಿ ತಂಡಕ್ಕೆ ಶರಣಾಯಿತು.
ನಾಲ್ಕನೇ ಪಂದ್ಯಾವಳಿಯು ಸಿದ್ಧಾಪುರ ಸಂತ ಜೋಸೆಫ್ ಹಾಗೂ ಆಮ್ಮತಿ ಸಂತ ಅಂತೋಣಿ ದೇವಾಲಯ ತಂಡಗಳ ನಡುವೆ ನಡೆದು ಮೊದಲು ಬ್ಯಾಟ್ ಸಂತ ಜೋಸಎಫ್ ತಂಡ 31 ರನ್ ಗಳಿಸಿದರೆ ಆಮ್ಮತಿ ಸಂತ ಅಂತೋಣಿ ದೇವಾಲಯದ ತಂಡವು 34 ರನ್ ಗಳಿಸಿದ ಸಿದ್ದಾಪುರ ತಂಡವನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
5ನೇ ಪಂದ್ಯಾವಳಿ ಮಡಿಕೇರಿ ಸಂತ ಮೈಕಲರ ದೇವಾಲಯ ಹಾಗೂ ಗೋಪಾಲಪುರ ತಂಡಗಳ ನಡುವೆ ನಡೆದು ಮಡಿಕೇರಿ ತಂಡ ಮೊದಲು ಬ್ಯಾಟಿಂಗ್ 30 ರನ್‌ಗಳ ಗುರಿಯನ್ನು ನೀಡಿದ್ದು ಇದನ್ನು ಬೆನ್ನಹತ್ತಿದ ಗೋಪಾಲಪುರ ತಂಡವು 31 ರನ್ ಗಳಿಸುವ ಮೂಲಕ ಮಡಿಕೇರಿ ತಂಡವನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.
6ನೇ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ತಂಡ ಹಾಗೂ ಪಾಲಿಬೆಟ್ಟ ತಂಡಗಳ ನಡುವೆ ನಡೆದು ಪೊನ್ನಂಪೇಟೆ ತಂಡವು ಮೊದಲಿಗೆ ಬ್ಯಾಂಟಿಗ್ ನಡೆಸಿ 51 ರನ್ ಗಳ ಗುರಿಯನ್ನು ನೀಡಿದ್ದು ಇದನ್ನು ಬೆನ್ನತ್ತಿದ್ದ ಪಾಲಿಬೆಟ್ಟ ತಂಡವು 31 ಗಳಿಸುವ ಮೂಲಕ ಪೊನ್ನಂಪೇಟೆ ತಂಡಕ್ಕೆ ಶರಣಾಯಿತು.