ಮೂಲಭೂತ ಸವಲತ್ತು ವಂಚಿತ ಕೊಟ್ಟೋಳಿ

Kottoli Setuve
Published on

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ


ಕೆದಮುಳ್ಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೊಟ್ಟೋಳಿ ಗ್ರಾಮ ರಸ್ತೆ, ಒಳಚರಂಡಿ, ವಿದ್ಯುತ್ ಸೇರಿದ್ದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮವನ್ನು ಬೆಸೆಯುವ ಏಕಮಾತ್ರ ರಸ್ತೆ ಉತ್ತಮವಾಗಿದ್ದು, ಉಳಿದ ಗಾ್ರುೀಣ ರಸ್ತೆಗಳು ಸಂಪೂರ್ಣ ಹಾಳಾಗಿದೆ.

ನಿರಂತರ ಕಾಡು ಹಂದಿಗಳ ಹಾವಳಿ, ಸರ್ಕಾರಿ ಬಸ್ಸುಗಳ ಕೊರತೆ ಸ್ಥಳೀಯರನ್ನು ಕಾಡುತ್ತಿದೆ. ಶಿಥಿಲಾವಸ್ಥೆಗೆ ಬಂದಿರುವ ಮುಖ್ಯ ಸೇತುವೆ ಯನ್ನು ಜನಪ್ರತಿನಿಧಿಗಳು ಹಾಗೂ ಸರ್ಕಾರ ಮುತುವರ್ಜಿ ವಹಿಸಿ ಮೇಲ್ದರ್ಜೆಗೆ ಏರಿಸುವಂತೆ ಗ್ರಾಮಸ್ಥರ ಆಗ್ರಹಿಸುತ್ತಿದ್ದಾರೆ. ಇದು ಕನ್ನಡ ದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ ಗ್ರಾಮ ಸಂಚಾರದಲ್ಲಿ ಕಂಡು ಬಂದ ಚಿತ್ರಣ.

ಕೊಟ್ಟೋಳಿ ಗ್ರಾಮ ತಾಲೂಕು ಕೇಂದ್ರವಾದ ವಿರಾಜಪೇಟೆಯಿಂದ ೬ ಕಿಲೋಮೀಟರ್ ದೂರದಲ್ಲಿದೆ. ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಅವರ ಮನೆ ಬಳಿಯಿಂದ ಬಾರಿಕಾಡು ಮಂಜಮರ, ಬೋಯಿಕೇರಿಯವರೆಗೆ ಅಂದಾಜು ೮ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಸಂಪೂರ್ಣ ಅಕ್ಷರಸ್ಥರಾದ ಈ ಗ್ರಾಮದಲ್ಲಿ ೪೫೦ ಮನೆಗಳಿವೆ. ೨ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ೧,೧೦೦ ಮತದಾರರಿದ್ದಾರೆ. ರಾಜಕೀಯ, ಕ್ರೀಡೆ, ಸೇನೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅಂದಾಜು ೫ ಎಕರೆ ದೇವರ ಕಾಡಿದೆ. ಶಿವರಾತ್ರಿ ಯಂದು ಈಶ್ವರ ದೇವರ ಹಬ್ಬ ನಡೆಯುತ್ತದೆ. ಮೀತಲತಂಡ ಇಸ್ಮಾಯಿಲ್, ಕುಟೈರಿರ ಪವಿತ್ರ, ಲತಾ ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯ ರಾಗಿದ್ದಾರೆ.

ಪರಿಶಿಷ್ಟ ಜಾತಿ ಪತ್ತು ಪಂಗಡಕ್ಕೆ ಸೇರಿದ ೩ ಕಾಲೂನಿಗಳಿವೆ. ಬೋಯಿಕೇರಿ ಆಶ್ರಯ ಕಾಲೂನಿಯಲ್ಲಿ ಹೆಚ್ಚಾಗಿ ನೀರಿನ ಸಮಸ್ಯೆ ಕಾಡುತ್ತಿದೆ. ಪರಿವಾರ ಕಾಲೂನಿಗೆ ಸೇರಿದ ರಸ್ತೆ, ಕೊಂಕಣ ರಸ್ತೆ, ದೂಮವತಿ ದೇವಸ್ಥಾನ ರಸ್ತೆ, ಮೊಟ್ಟಂಡಾಣೆ ರಸ್ತೆ, ಪುಂಜೇರಿ ಕೊಟ್ಟೋಳಿ ಬಾರಿಕಾಡು ರಸ್ತೆಗಳಿಗೆ ಕಲ್ಲು ಹಾಕಲಾಗಿದ್ದು. ಡಾಂಬರು ಕಾಣದೆ ದಶಕಗಳೆ ಕಳೆದಿದೆ.

ಮಂಜಕಾಳೆ ಅಚ್ಚಮಯ್ಯ ಎಂಬವರು ಈ ಜಾಗದಲ್ಲಿ ವಾಸಿಸುತ್ತಿದ್ದರು. ಸುತ್ತಮುತ್ತ ಮೈದಾನವಾದ ಕಾರಣ ಮಂಜಕಳ ಎಂದು ಕರೆಯುತ್ತಿ
ದ್ದರು. ಇದೇ ಸ್ಥಳದಲ್ಲಿ ಬೃಹದಾಕಾರದ ಮರವೊಂದಿದು ಮಂಜಕಳ ಹೋಗಿ ಮಂಜಮರ ಎಂದು ಕರೆಯುತ್ತಿದ್ದಾರೆ.

ಕುಟುಂಬಗಳು: ಅಮ್ಮಣಿಚಂಡ, ಪಟ್ರಪಂಡ, ಕೋಣೇರಿರ, ಕೋದಂಡ, ಚೆನಿಯಪಂಡ, ನಡಿಕೇರಿಯಂಡ, ಕರಿನೆರವಂಡ, ಕೋಡಿರ, ಕೊಟ್ಟಂಗಡ, ಚೇನಂಡ(ಕೊಡವ), ಕುಟೈರಿರ, ಐಪೋರುಮಂಡ,(ಐರಿ), ಕುಲ್ಲಚೆಟ್ಟಿರ(ಅರೆಭಾಷೆಗೌಡ), ಚಂಗಚಂಡ(ಹೆಗ್ಗೆಡೆ), ಮೀತಲತಂಡ, ಕುವೈಂಡ, ಆಲಿರ, ಆಮ್ಮಂಡಾಣೆ, ಕೂವಲೆರ, ಕುಂಜಿರ(ಕೊಡವ ಮಾಪಿಳ್ಳೆ), ಹೂಬೇಲು(ಕೊಂಕಣಿ), ಮುಸಲ್ಮಾನ, ಪರಿಶಿಷ್ಟ ಜಾತಿ, ಪಂಗಡ, ಆಜಲೇರ(ಮೊಗೇರ), ಪರಿಹಾರ ಕುಟುಂಬಗಳಿವೆ.

ಕಟ್ಟಡಗಳು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ೨ ಅಂಗನವಾಡಿ, ಅರಭಿಶಾಲೆ, ಮಸೀದಿ, ಈಶ್ವರ ದೇವಾಲಯ, ಉದ್ಭವ ಗಣಪತಿ ದೇವಾಲಯ, ದವಸ ಭಂಡಾರ.

ಸಾಧಕರು: ಕೋಣೇರಿರ ರೋಶನಿ(ಎಸಿಎಫ್), ಕೋಣೇರಿರ ಜಗದೀಶ್ ಪೊನ್ನಪ್ಪ (ಅಂತಾರಾಷ್ಟ್ರೀಯ ಹಾಕಿ ಆಟಗಾರ), ಕೋಡಿರ ರಾಬಿನ್ (ಹಾಕಿ), ಡಾ ಕೋಣೇರಿರ ಸನ್ನು ನಂಜಪ್ಪ ಪಶು ವೈದ್ಯಾಧಿಕಾರಿ (ನಿವೃತ್ತ),ಕೋಣೇರಿರ ಅನು ಅಯ್ಯಪ್ಪ ಸಿಎಫ್‌ಟಿಆರ್‌ಐ ವಿಜ್ಞಾನಿ (ನಿವೃತ್ತ), ಕೋಣೇರಿರ ಅರ್ಜುನ ಬಿಟಿಎಸ್ ಬಸ್ಸ್ ಚಾಲಕ ಅಪಘಾತ ರಹಿತ ಚಾಲನೆಗೆ ಚಿನ್ನದ ಪದಕ, ಕೊಂಗಂಡ ರತಿ ನಯ್ ಝಾ ಭಾರತ ಸರ್ಕಾರದ ಪ್ರವಸೋಧ್ಯಮ ಕಾರ್ಯದರ್ಶಿ, ಚಂಗಚಂಡ ಪ್ರೀಣ್ ಕಾವೇರಪ್ಪ(ಂಗ್‌ಕಮಾಂಡರ್), ಕುವೈಂಡ ಹಂಜತುಲಾ (ಕಿತ್ತಳೆನಾಡು ಪತ್ರಿಕೆ ಸಂಪಾದಕ), ಅಮ್ಮಣಿಚಂಡ ಪ್ರವೀಣ್ ಚಂಗಪ್ಪ(ಚಿತ್ರ ಸಾಹಿತಿ), ಕರ್ನಲ್ ಚೇನಂಡ ಮುತ್ತಣ್ಣ (ನಿವೃತ್ತ), ಎಂ.ಎಚ್. ಇದಾಯಿತುಲಾ (ಸುಪ್ರಿಂಕೋರ್ಟ್ ವಕೀಲ).

ಕೊಟ್ಟುಕೊಳ್ಳಿ: ಹಿಂದೆ ರಾಜರ ಕಾಲದಲ್ಲಿ ಮೂಡಣ ದಿಕ್ಕಿನಿಂದ (ಬಡುವ) ಹಲವಾರು ಜನರು ತಮ್ಮಲ್ಲಿ ಬೆಳೆದ ದವಸ ದಾನ್ಯ, ಈರುಳ್ಳಿ, ಆಲುಗೆಡ್ಡೆ ತಂದು ಮೈದಾನದಲ್ಲಿ ಮಾರಾಟ ಮಾಡುತ್ತಿದ್ದರು. ಅವರಿಗೆ ಇಲ್ಲಿ ಬೆಳೆದಂತ ಭತ್ತ ನೀಡುತ್ತಿದ್ದರು. ಈ ವಿಚಾರ ರಾಜರ ಗಮನಕ್ಕೆ ಬಂದಾಗ ಕೊಟ್ಟುಕೊಳ್ಳಿ ಎಂದು ಹೇಳಿದ್ದರು. ಕೊಟ್ಟುಕೊಳ್ಳಿ ದಿನಕಳೆದಂತೆ ಕೊಟ್ಟೋಳಿ ಆಗಿದೆ.

**
ಮುಖ್ಯ ರಸ್ತೆ ಹೊರತು ಪಡಿಸಿದರೆ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಜಲಜೀವನ್ ಮಿಷನ್‌ನಡಿ ೧೨೦ ಮನೆಗಳಿಗೆ ನೀರು ಸರಬರಾಜು ಸಂಪರ್ಕ ನೀಡಲು ಬಾಕಿ ಇದೆ. ಉಳಿದ ಮನೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಪರಿಶಿಷ್ಟ ಜಾತಿ ಪತ್ತು ಪಂಗಡಕ್ಕೆ ಸೇರಿದ ೩ ಕಾಲೂನಿಗಳಿವೆ. ಬೋಯಿಕೇರಿ ಆಶ್ರಯ ಕಾಲೂನಿಯಲ್ಲಿ ಹೆಚ್ಚಾಗಿ ನೀರಿನ ಸಮಸ್ಯೆ ಕಾಡುತ್ತಿದೆ. ಮೀತಲತಂಡ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಸದಸ್ಯ.

**
ಚಂಗಚಂಡ ಐನ್‌ಮನೆಗೆ ತೆರಳುವ ರಸ್ತೆಗೆ ೭ ವರ್ಷ ಹಿಂದೆ ಕಲ್ಲು ಹಾಕಲಾಗಿದೆ. ಈವರೆಗೂ ರಸ್ತೆ ಭಾಗ್ಯ ಕಂಡಿಲ್ಲ. ಪಂಚಾಯಿತಿ ಸದಸ್ಯರು ಹಲವಾರು ಬಾರಿ ಪ್ರಯತ್ನಿಸಿದರು ಪ್ರಯೋಜವಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸದಸ್ಯರ ಕಾರ್ಯ ಶ್ಲಾಘನೀಯ. ಸಮಸ್ಯೆಗಳ ಪರಿಹಾರಕ್ಕೆ ಸಕಾರತ್ಮಕವಾಗಿ ಸ್ಪಂದಿಸುತ್ತಾರೆ. ಚಂಗಚಂಡ ಪೂವಯ್ಯ, ಗ್ರಾಮಸ್ಥರು.

**
ಜನರ ಬೇಡಿಕೆಗಳ ಮೂಲಕ ಕೆಲಸ ನಿರ್ವಹಿಸುವಂತಾಗಬೇಕು. ಮುಖ್ಯರಸ್ತೆಯಲ್ಲಿ ಬಹಳ ಹಿಂದಿನ ಕಾಲದ ಸೇತುವೆ ಶಿಥಿಲಾವಸ್ಥೆಗೆ ಬಂದಿದೆ. ಎದುರಿನಿಂದ ಬರುವ ವಾಹನಗಳಿಗೆ ದಾರಿ ಕೊಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಸೇತುವೆಯ ಒಂದು ಭಾಗ ಮುಳುಗಡೆ ಆಗಿತ್ತಿದ್ದು ಸಂಚಾರ ಅಸ್ತವ್ಯಸ್ಥ ವಾಗುತ್ತದೆ. ಕೋಣೇರಿರ ಸಂಪಿ ಅಚ್ಚಯ್ಯ, ಗ್ರಾಮಸ್ಥರು.

**
ಗುಂಡಿಗೇರೆ ಅಂಗವಾಡಿಯಿಂದ ಮಂಜಮರದವರೆಗೆ ೩ ಕಿಲೋಮೀಟರ್ ಇದೆ. ಈ ಭಾಗದಲ್ಲಿ ಬಸ್ಸಿನ ಸೌಕರ್ಯ ಇಲ್ಲ. ಇದರಿಂದ ವಿದ್ಯಾರ್ಥಿಗಳು ಸೇರಿದ್ದಂತೆ ಸಾರ್ವಜನಿಕರು ನಡೆದುಕೊಂಡೆ ತೆರಳಬೇಕಿದೆ. ೮ನೇ ತರಗತಿವರೆಗೆ ಮಾತ್ರ ಇದ್ದು, ಹೆಚ್ಚನ ವಿದ್ಯಾಭ್ಯಾಸಕ್ಕೆ ರಾಜಪೇಟೆಗೆ ತೆರಳಬೇಕು. ಬೆಳಗ್ಗೆ ಹಾಗೂ ಸಂಜೆ ಸರ್ಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಚಂಗಚಂಡ ಬಾಬಿ, ನಿವೃತ್ತ ಯೋಧ.

**
ಕಾಡಾನೆಗಳ ಹಾವಳಿ ಇಲ್ಲದಿದ್ದರೂ ಕಾಡು ಹಂದಿಗಳ ಉಪಟಳದಿಂದ ಸುತ್ತಮುತ್ತಲು ಯಾರು ಭತ್ತ ಕೃಷಿ ಮಾಡುತ್ತಿಲ್ಲ. ವಾರಕ್ಕೆ ಒಂದು ದಿನ ಸಂಚಾರಿ ಚಿಕಿತ್ಸಾ ವಾಹನ ಊರಿಗೆ ಬರುವ ವ್ಯವಸ್ಥೆ ಮಾಡಿದರೆ ಸುತ್ತಮುತ್ತಲ ಕಾಲೂನಿಗಳಿರುವ ಕಾರ್ಮಿಕರಿಗೆ ಉಪಯೋಗವಾಗುತ್ತದೆ. ನ್ಯಾಯಬೆಲೆ ಅಂಗಡಿಯಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಲಭಿಸುತ್ತಿಲ್ಲ. ಅಮ್ಮಂಡಾಣೆ ಆಲಿ, ಗ್ರಾಮಸ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net