ಶ್ರೀಮಂತವಾದ ಕನ್ನಡ ಸಾಹಿತ್ಯವನ್ನು ಓದಿ

26 vpt. 4
Published on
 ವಿರಾಜಪೇಟೆ:  ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಿ.ಜಿ ರಘುನಾಥ್ ನಾಯ್ಕ್, ಹಾಗೂ ಬಿ.ಆರ್ ಸಾಯಿನಾಥ್ ದತ್ತಿನಿಧಿ ಕಾರ್ಯಕ್ರಮವು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು . ಕಾರ್ಯಕ್ರಮದ ದತ್ತಿ ಉಪನ್ಯಾಸಕರಾಗಿ ಆಗಮಿಸಿದ್ದ ಗೋಣಿಕೊಪ್ಪ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ವಿಜಯಲಕ್ಷ್ಮಿ ಮಂಜುನಾಥ್  ಕನ್ನಡದ ಕವಿಗಳು ಮತ್ತು ಅವರ ಕಾವ್ಯ ಪರಿಚಯ ವಿಚಾರವಾಗಿ ಮಾತನಾಡುತ್ತಾ, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದ ಸಾಹಿತ್ಯವಾಗಿದ್ದು ಎಲ್ಲರೂ ಸಾಹಿತಿಗಳಾಗದಿದ್ದರೂ ನಮ್ಮ ಕನ್ನಡದ ಕವಿಗಳು ಬರೆದಿರುವ ಕತೆ, ಕವನ, ಕಾದಂಬರಿಗಳನ್ನಾದರೂ ಓದಿ ಎಂದರು. ಅಲ್ಲದೆ ಹಳೆಗನ್ನಡ , ನಡುಗನ್ನಡ, ಆಧುನಿಕ ಕನ್ನಡದ ಮಹಾನ್ ಕವಿಗಳ ಕಾವ್ಯಗಳ ವಿಚಾರಧಾರೆಯ ಬಗೆಗೆ ಮಾತನಾಡುತ್ತಾ,  ಕನ್ನಡದ ಕವಿಗಳು ರಾಜಾಶ್ರಯವಿದ್ದಾಗ ಯಾವ ರೀತಿಯ ಸಾಹಿತ್ಯ ಬರೆದರು, ಸಾಮಾಜಿಕವಾಗಿ ಜನಸಾಮಾನ್ಯರ ಜೊತೆ ಬೆರೆತ ಮೇಲೆ ಯಾವ ಬಗೆಯ ಸಾಹಿತ್ಯ ಹೊರಹೊಮ್ಮಿತು. ಜಗತ್ತು ಆಧುನಿಕತೆಗೆ ತೆರೆದುಕೊಂಡಾಗ ಬಿ.ಎಂ ಶ್ರೀ ಅಂಥವರು ಟಿ.ಪಿ ಕೈಲಾಸಂ ಹೇಗೆ ಸಾಹಿತ್ಯ ರಚನೆ ಮಾಡಿದರು ಎಂದು ವಿವರಿಸಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net