ವಿರಾಜಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

3 vpt 1
Published on

ವಿರಾಜಪೇಟೆ : ಕರಾವಳಿ ಜಿಲ್ಲೆಗಳಲ್ಲಿ ದಶಕಗಳಿಂದಲೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ, ಹತ್ಯೆ ಮತ್ತು ಕೌಟುಂಬಿಕ ದೌರ್ಜನ್ಯಗಳು ನಡೆಯುತ್ತಲೇ ಇರುವುದು ಖಂಡನೀಯ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಕೇತಿರ ಯತೀಶ್ ಹೇಳಿದರು.

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರ ನಗರದ ಗಡಿಯಾರ ಕಂಬದ ಬಳಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಮತ್ತು ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತ ನಾಡಿದರು. ಸುಹಾಸ್ ಶೆಟ್ಟಿ ಕರ್ತವ್ಯ ಮುಗಿಸಿ ಮನೆಗೆ ಹಿಂದಿರಿಗುವ ಸಮಯದಲ್ಲಿ ವಾಹನಕ್ಕೆ ಅಡ್ಡಗಟ್ಟಿದ ಮತಾಂಧ ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹೇಯ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ನಂತರ ಮಾತನಾಡಿದ ಬಿಜೆಪಿ ಪ್ರಮುಖ ಟಿ. ಪಿ. ಕೃಷ್ಣ, ಹಿಂದುಗಳ ಮೇಲೆ ಆಕ್ರಮಣಗಳು, ಹತ್ಯೆಯಂತಹ ಹೀನ ಕೃತ್ಯಗಳನ್ನು ಮಾಡುತ್ತಿರುವುದು ಯಾರೆಂದು ಸಮಾಜಕ್ಕೆ ಗೊತ್ತಿದೆ. ಸುಹಾಸ್ ಶೆಟ್ಟಿ ಹತ್ಯೆ ಮಾಡಿದ ಜಿಹಾದಿ ಗಳ ಮನಸ್ಥಿತಿಗೆ ನಮ್ಮ ಧಿಕ್ಕಾರವಿರಲಿ ಎಂದರು. ಕಾಶ್ಮೀರದಲ್ಲಿ 26 ಮಂದಿ ಯನ್ನು ಹತ್ಯೆಗೈದ ಉಗ್ರಗಾಮಿಗಳನ್ನು ಸದೆಬಡಿಯುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು. ಜಿಹಾದಿಗಳ ರಾಕ್ಷಸೀ ಪ್ರವೃತಿಯನ್ನು ತಡೆಯಲು ಸರ್ವ ಹಿಂದುಗಳೂ ಒಂದಾಗಬೇಕು ಎಂದವರು ಕರೆ ನೀಡಿದರು. ಹಿಂದುಪರ ಸಂಘಟನೆಗಳ ಪ್ರಮುಖರಾದ ಕುಟ್ಟಂಡ ಪ್ರಿನ್ಸ್ ಗಣಪತಿ, ಕುಟ್ಟಂಡ ಮಿರನ್, ವಿವೇಕ ರೈ, ಬಿಜೆಪಿ ತಾಲೂಕು ಅಧ್ಯಕ್ಷ ಸುವಿನ್ ಗಣಪತಿ, ಉನ್ನಿ ಕೃಷ್ಣನ್, ವಿನೂಪ್ ಕುಮಾರ, ಪುರಸಭಾ ಸದಸ್ಯರಾದ ಸುನೀತಾ, ಮಹದೇವ ಮತ್ತು ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು. ಇದೇ ಸಂದರ್ಭ ಒಂದು ನಿಮಿಷ ಮೌನಾಚರಣೆಯನ್ನು ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net