

ವಿರಾಜಪೇಟೆ : ವಿರಾಜಪೇಟೆ ಮಾಂಸ ಮಾರುಕಟ್ಟೆ ಬಳಿ (ಪುರಸಭೆಯ ಮಳಿಗೆ ಮುಂಭಾಗ) ಶನಿವಾರ ಬೆಳಗ್ಗೆ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದೆ. ಅಂದಾಜು 50 ವರ್ಷದ ವ್ಯಕ್ತಿ ಮಲಗಿರುವ ಸ್ಥಿತಿಯಲ್ಲಿ ದೇಹ ದೊರಕಿದೆ. ಬಸ್ ತಂಗುದಾಣದ ಬಳಿಯ ಸ್ಥಳೀಯರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.ವಿರಾಜಪೇಟೆ ನಗರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಎಂದು ಪ್ರಕರಣ ದಾಖಲಿಸಲಾಗಿದೆ. ಮೃತ ದೇಹವನ್ನು ಮಡಿಕೇರಿ ಶವಗಾರದಲ್ಲಿ ಇರಿಸಲಾಗಿದೆ. ಇವರ ಸಂಬಂಧಿಕರು ಇದ್ದರೆ ವಿರಾಜಪೇಟೆ ನಗರ ಠಾಣೆ 08274-257333 ಅಥವಾ ಠಾಣಾಧಿಕಾರಿ 9480804955ಗೆ ಸಂಪರ್ಕಿಸುವಂತೆ ಇಲಾಖೆ ಪ್ರಕಟಣೆ ತಿಳಿಸಿದೆ.