ಮಹಾಂತಸ್ವಾಮಿ ಪಪೂ ವಿದ್ಯಾಲಯಕ್ಕೆ ವೀರಾಗ್ರಣಿ ಪ್ರಶಸ್ತಿ

5 hbv 1 KRIDAKUTA
Published on

ಹಂಸಭಾವಿ: ಪ್ರಸಕ್ತ ಸಾಲಿನ ಪಪೂ ವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸ್ಥಳಿಯ ಮಹಾಂತಸ್ವಾಮಿ ಪಪೂ ವಿದ್ಯಾಲಯವು ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ. ಗುಂಪು ಆಟಗಳಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದ ಖೋ-ಖೋದಲ್ಲಿ ಪ್ರಥಮ, ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕರ ಕಬಡ್ಡಿ ದ್ವಿತೀಯ,ಬಾಲಕರ ಮತ್ತು ಬಾಲಕಿಯರ ಟೆನ್ನಿಸ್ ಪ್ರಥಮ, ಬಾಲಕರ ಟೆನ್ನಿ ಕ್ವೇಟ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ 20 ಪ್ರಥಮ, 13 ದ್ವಿತೀಯ ಮತ್ತು 6 ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಕ್ಷತಾ ಮುಳಗುಂದ ಬಾಲಕಿಯರ ವಿಭಾಗದ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ ಎಂದು ಪ್ರಾಚಾರ್ಯ ಎಂ.ಸಿ. ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net