ಸಂಭ್ರಮದ ವೀರಭದ್ರೇಶ್ವರ ಕಾರ್ತಿಕೋತ್ಸವ

jatre
ಜಮಖಂಡಿ ನಗರದ ಮುಧೋಳ ರಸ್ತೆಯಲ್ಲಿರುವ ವೀರಭದ್ರೇಶ್ವರ ಕಾರ್ತಿಕೋತ್ಸವದ ನಿಮಿತ್ತ ಬನಶಂಕರಿ ದೇವಸ್ಥಾನ ಹಾಗೂ ವೀರಭದ್ರೇಶ್ವರ ಆವರಣದಲ್ಲಿ ಪುರವಂತರು ವೀರಗಾಸೆ ಪ್ರದರ್ಶಿಸಿದರು.
Published on

ಜಮಖಂಡಿ: ನಗರದ ಮುಧೋಳ ರಸ್ತೆಯಲ್ಲಿರುವ ವೀರಭದ್ರೇಶ್ವರ ಕಾರ್ತಿಕೋತ್ಸವ ಪಲ್ಲಕ್ಕಿ ಉತ್ಸವ, ಅಗ್ನಿ ಪ್ರವೇಶ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ 6 ಗಂಟೆಗೆ ಮತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ರುದ್ರಾಭಿಷೇಕ, ಮಹಾಪೂಜೆ ನಡೆಯಿತು. 9 ಗಂಟೆಗೆ ಅಗ್ನಿಪುಟ ನೆರವೇರಿಸಿ 20ಕ್ಕೂ ಹೆಚ್ಚು ಪುರವಂತರು ಮತ್ತು ನೂರಾರು ಭಕ್ತರು ಅಗ್ನಿಪ್ರವೇಶ ಮಾಡಿ ಭಕ್ತಿ ಮೆರೆದರು.

ವೀರಭದ್ರೇಶ್ವರ ಮೂರ್ತಿಗೆ ಆಕರ್ಷಣೀಯವಾಗಿ ಬುತ್ತಿಪೂಜೆ ನೆರವೇರಿಸಿ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವೀರಭದ್ರೇಶ್ವರ ದೇವರ ಮೂರ್ತಿ ಹಾಗೂ ಪಲ್ಲಕ್ಕಿಯೊಂದಿಗೆ ಪುರವಂತರು, ಮುತ್ತೈದೆಯರು ವಿವಿಧ ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪುರವಂತರ ವೀರಗಾಸೆ ಗಮನ ಸೆಳೆಯಿತು. ನಂತರ ರಾತ್ರಿ 8 ಗಂಟೆಗೆ ಕಾರ್ತಿಕೋತ್ಸವ, ಮಹಾಮಂಗಳಾರತಿ ನಡೆಯಿತು. ಕಕಮರಿ ಹಾಗೂ ಬಡ್ಡೂರ ಕುಟುಂಬದ ಯುವ ಕಲಾವಿದರಿಂದ ವಿಶೇಷ ಭಜನಾಪದಗಳು ನಡೆದವು.
ವಿವಿಧ ಪಕ್ಷದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವ್ಯಾಪಾರಸ್ಥರು, ಸಹಸ್ರ ಸಂಖ್ಯೆಯಲ್ಲಿ ಭಕ್ತರು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು.

ಸಮಿತಿ ಹಿರಿಯ ಸದಸ್ಯರಾದ ಆರ್.ಎಸ್. ಅಕ್ಕಿ, ಎಂ. ಕೆ. ಹಿಟ್ಟಿನಮಠ, ಮಹಾದೇವ ಸಿಂಧೂರ, ಸಂಗಯ್ಯ ಮುಧೋಳಮಠ, ಸಿ.ಆರ್. ಸೋಲಾಪೂರ, ಮಹಾಲಿಂಗ ಬಡ್ಡೂರ, ಈರಣ್ಣ ಅಕ್ಕಿ, ಡಾ. ಆನಂದ ಮಲಗಾಣ, ರಾಜು ಸಿಂಧೂರ, ವಿಶ್ವನಾಥ ಅಕ್ಕಿ, ರಾಜಶೇಖರ ಅಕ್ಕಿ, ಮಲ್ಲಿಕಾರ್ಜುನ ಹೋಳಗಿ, ಅಶೋಕ ಅಥಣಿ, ಪ್ರಶಾಂತ ಚರಕಿ, ಈರಣ್ಣ ತೆಲಸಂಗ, ಮಹಾನಿಂಗ ವಂದಾಲ, ಸಿದ್ದಯ್ಯ ಕಲಕತ್ತಿಮಠ, ಅರ್ಚಕ ಸುನೀಲ ಕಾಡದೇವರಮಠ, ಗಂಗಾಧರ ಸಿಂಧೂರ, ದಾನಯ್ಯ ಮಠಪತಿ, ಶಿವು ಬಾಳಿಗಿಡದ, ಶ್ರೀಕಾಂತ ಕಕಮರಿ, ರಾಜು ಬಿಜಾಪೂರ, ನವೀನ ಅಥಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net