ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ವಿಪ್ರೋತ್ಸವ, ಪ್ರತಿಭಾ ಪುರಸ್ಕಾರ

raichur
raichur
Published on

ರಾಯಚೂರು ಪ್ರಸ್ತುತ ದಿನಗಳಲ್ಲಿ ಜಾತಿಗಳ ಮೇಲೆ ರಾಜಕಾರಣ ನಡೆದಿದ್ದು, ಸೀಟ್ ಹೊಂದಾಣಿಕೆ, ರಾಜಕೀಯ ಜೋಡಣೆ ಎನ್ನುವುದು ರಾಜಕಾರಣವಲ್ಲ ತತ್ವಸಿದ್ಧಾಂತಗಳ ಮೇಲೆ ಹಾಗೂ ತತ್ವ ಸಿದ್ಧಾಂತಗಳಿಗಾಗಿ ಹೋರಾಟ ಮಾಡವುದು ನಿಜವಾದ ರಾಜಕಾರಣವಾಗಿದೆಂದು ಖ್ಯಾತ ವಾಗ್ನಿ, ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಹಮ್ಮಿಕೊಂಡಿದ್ದ ವಿಪ್ರೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಬ್ರಾಹ್ಮಣರನ್ನು ಎಂದರೆ ಪುರೋಹಿತ ಶಾಹಿಗಳೆಂದು ಹೇಳಲಾಗುತ್ತಿದ್ದು, ಪುರೋ ಎಂದರೆ ಭವಿಷ್ಯವಾಗಿದ್ದು, ಭವಿಷ್ಯದ ಹಿತವನ್ನು ಕೇಳುವವರೇ ಬ್ರಾಹ್ಮಣರಾಗಿದ್ದು, ಸಮಾಜದ ಉದ್ದಾರವನ್ನು ಬಯಸುವಂತಹ ವರ್ಗವೇ ಬ್ರಾಹ್ಮಣ ವರ್ಗವಾಗಿದೆ ಎಂದರು.

ಪಕ್ಷಗಳ ಕಾರ್ಯಕರ್ತರಾಗಲಿ, ಪಕ್ಷದ ಜನಪ್ರತಿನಿಧಿ ಗಳಾಗಲಿ ಯಾವ ಪಕ್ಷಕ್ಕಾದರೂ ಹೋಗಬಹುದು, ಎಲ್ಲಿಯಾ ದರೂ ಇರಬಹುದು ಎಂದು ತಿಳಿದುಕೊಂಡಿದ್ದಾರೆ ಆದರೆ ಇದು ನಿಜವಾದ ರಾಜಕಾರಣ ಅಲ್ಲ. ತತ್ವಸಿದ್ಧಾಂತಗಳಿಗೆ ಬದ್ಧರಾಗಿರುವುದು ನೈಜ ರಾಜಕಾರಣವಾಗಿದೆ. ಸಮಾಜದ ಪ್ರತಿಯೊಬ್ಬರ ಹಿತವನ್ನು ಬಯಸುವ ಸಮಾಜ ಬ್ರಾಹ್ಮಣ ಸಮಾಜವಾಗಿದ್ದು, ಸ್ವ-ಹಿತಕ್ಕಾಗಿ ಬ್ರಾಹ್ಮಣರಲ್ಲಿ ಯಾವುದೇ ಮಂತ್ರಗಳಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಕುರಿತು ಮಾತ್ರ ಮಂತ್ರಗಳಿವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಇತಿಹಾಸವನ್ನು ನೋಡಿದಾಗ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ಪಾತ್ರ ಅತ್ಯಂತ ಮುಖ್ಯವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ತತ್ವಸಿದ್ದಾಂತಗಳು ಕಡಿಮೆಯಾಗುತ್ತಿದ್ದು, ಸರಿಪಡಿಸುವ ಶಕ್ತಿ ಮತ್ತು ಸಾಮರ್ಥ್ಯ ಬ್ರಾಹ್ಮಣ ಸಮಾಜಕ್ಕೆ ಮಾತ್ರ ಇದೆ ಎಂದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಯುಗ ಯುಗಗಳಿಂದಲೂ ಬ್ರಾಹ್ಮಣರು ಸರಸ್ವತಿ ಪುತ್ರರಾಗಿದ್ದಾರೆ. ಹುಟ್ಟಿನಿಂದಲೇ ಸರಸ್ವತಿಯನ್ನು ನಾಲಿಗೆಯಲ್ಲಿಟ್ಟುಕೊಂಡಿರುವ ಬ್ರಾಹ್ಮಣರುದಾರಿ ತಪ್ಪಿದವರ ನ್ನು ಉತ್ತಮ ದಾರಿಯಲ್ಲಿ ಕೊಂಡೋಯುವಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನಪ್ರತಿನಿಧಿಗಳೆಂದರೆ ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತಾರೆ. ಅನ್ಯಾಯಕ್ಕೊಳಗಾದ ವ್ಯಕ್ತಿಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಪಕ್ಷ ಬೇರೆ ಆದರೆ ಬ್ರಾಹ್ಮಣ ಸಮಾಜದವರೊಂದಿಗೆ ಬಾಂದವ್ಯ ಸದಾ ಇರುತ್ತದೆ ಎಂದು ಹೇಳಿದರು.

ನಂತರ ಹಿರಿಯ ಲೆಕ್ಕ ಪರಿಶೋಧಕ ಎಸ್.ವೆಂಕಟ ಕೃಷ್ಣನ್ ಮತ್ತು ನಿವೃತ್ತ ಉಪನ್ಯಾಸಕಿ ಕಲಾವತಿ ರಾಘವೇಂದ್ರರವ್ ಬದ್ರಿರಿಗೆ ವಿಪ್ರ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಡಾ.ಸಂಜಯ, ವಿಜಯೇಂದ್ರ ಕುಕನೂರು ಮತ್ತು ಸುಪ್ರಿಯಾ ಸೇರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸುಗೋಡು ಜಯಸಿಂಹ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ರಮೇಶ ಕುಲಕರ್ಣಿ, ಮಹಾನಗರ ಪಾಲಿಕೆ ಪ್ರಭಾರ ಅಧ್ಯಕ್ಷ ಸಾಜೀದ್ ಸಮೀರ್, ಸಮಾಜದ ಜಿಲ್ಲಾ ಮಹಾಪೋಷಕ ನರಸಿಂಗ್‌ರಾವ್ ದೇಶಪಾಂಡೆ, ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ.ಸಿ.ಕುಲಕರ್ಣಿ, ಜಿಲ್ಲಾ ಸಂಚಾಲಕ ವೇಣುಗೋಪಾಲ, ಡಾ.ಸಯಮೀಂದ್ರ ಕುಲಕರ್ಣಿ, ಅರವಿಂದ ಕುಲ್ಕರ್ಣಿ ವೆಂಕಟೇಶ ದೇಸಾಯಿ, ಡಾ.ಆನಂದತೀರ್ಥ ಫಡ್ನಿಸ್, ಸದಾನಂದ ಪ್ರಭು, ಅರವಿಂದ ಕುಲಕರ್ಣಿ, ಪ್ರಾಣೇಶ ಮುತಾಲಿಕ, ಸುನಿತಾ ಕಕ್ಕೇರಿ, ಕಿಶನರಾವ್, ಗೋವಿಂದರಾವ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net