ಶೀಘ್ರದಲ್ಲೇ ವಿಪ್ರ ಮಹಿಳಾ ಸಮಾವೇಶ

16 NRL 2
Published on

ನರೇಗಲ್ಲ: ಜಿಲ್ಲಾ ವಿಪ್ರ ಮಹಿಳಾ ಸಮಾವೇಶವನ್ನು ಗದಗ ನಗರದಲ್ಲಿ ಶೀಘ್ರದಲ್ಲಿಯೇ ಆಯೋಜಿಸಲಾಗುತ್ತದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿ, ಮಹಿಳೆಯರು ಒಟ್ಟಾದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಸಂಘಟನಾ ಸಭೆಯಿಂದ ಹೊಸ ಗುರಿ ಸಾಧಿಸಲು ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದರು.
ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಷಿ ಮಾತನಾಡಿ, 2025ರ ಜನವರಿ 18, 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುವರ್ಣ ಮಹೋತ್ಸವ ಸಮಾರಂಭ ಜರುಗಲಿದೆ. ಸಮಾವೇಶದಲ್ಲಿ ನಾಡಿನ ವಿಪ್ರರು ಒಟ್ಟಿಗೆ ಸೇರಲಿದ್ದಾರೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಆರ್ಥಿಕ ಅನುಕೂಲಗಳಿವೆ. ಅವುಗಳನ್ನು ಬಳಸಿಕೊಂಡು ಕರಕುಶಲ, ಗುಡಿ ಕೈಗಾರಿಕೆ ಮತ್ತು ಉದ್ಯಮ ಸ್ಥಾಪಿಸಿ ಸ್ವಾವಲಂಬನೆ ಹೊಂದಬಹುದು ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಅನಿಲ ತೆಂಬದಮನಿ, ತಾರಾ ನಾಡಜೋಷಿ, ಶೈಲಜಾ ಕುಲಕರ್ಣಿ ಇದ್ದರು. ವಿಮಲಾಬಾಯಿ ಗ್ರಾಮಪುರೋಹಿತ ಅಧ್ಯಕ್ಷತೆ ವಹಿಸಿದ್ದರು. ಸನ್ಮತಿ ಸದರಜೋಷಿ, ಪದ್ಮಾ ಕುಲಕರ್ಣಿ, ಜ್ಯೋತಿ ನಾಡಿಗೇರ, ಲಕ್ಷ್ಮೀ ಗ್ರಾಮಪುರೋಹಿತ, ವಿದ್ಯಾ ಗ್ರಾಮಪುರೋಹಿತ, ಸುಶೀಲಾ ಪುರಾಣಿಕ, ಅನಿತಾ ಗ್ರಾಮಪುರೋಹಿತ, ಪ್ರಭಾ ರಾಯಭಟ್ಟನವರ, ಜಯಶ್ರೀ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಪೂಜಾ ಗ್ರಾಮಪುರೋಹಿತ, ವಾಣಿ ಕುಲಕರ್ಣಿ, ಅನಘಾ ಗ್ರಾಮಪುರೋಹಿತ, ಅನುಪಮಾ ಗ್ರಾಮಪುರೋಹಿತ, ರೂಪಾ ಗ್ರಾಮಪುರೋಹಿತ, ಸುಮಾ ಉಡುಪಿ, ಪ್ರಭಾ ಕುಲಕರ್ಣಿ ಇದ್ದರು.
ಕಾರ್ಯದರ್ಶಿ ರಘುನಾಥ ಕೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಸೀಮಾ ಕೊಂಡಿ ಮಾತನಾಡಿದರು. ರಾಜಶ್ರೀ ಕುಲಕರ್ಣಿ ನಿರೂಪಿಸಿ, ಪಲ್ಲವಿ ಗ್ರಾಮಪುರೋಹಿತ ಪ್ರಾರ್ಥಿಸಿ, ಪರಿಮಳಾ ಗ್ರಾಮಪುರೋಹಿತ ಸ್ವಾಗತಿಸಿ, ರೇಣುಕಾ ಗ್ರಾಮಪುರೋಹಿತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net