ಸಂಘಟನೆ ಬಲವರ್ಧನೆಗೆ ಸಮಾವೇಶ ಸಹಕಾರಿ

vipra
ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಭಾನುವಾರ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024ಅನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಆಯೋಜಿಸಿದ ಈ ಮಹಿಳಾ ಸಮಾವೇಶ ಒಂದು ವಿಭಿನ್ನ ಪರಿಕಲ್ಪನೆ. ಎಲ್ಲ ವರ್ಗದ ಮಹಿಳೆಯರ ಪಾಲ್ಗೊಳ್ಳುವಿಕೆ, ಉಚಿತ ಆರೋಗ್ಯ ಶಿಬಿರ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಈ ವಿಪ್ರ ಮಹಿಳಾ ಸಮಾವೇಶ ಸಂಘಟನೆ ಬಲವರ್ಧನೆಗೆ ಸಹಕಾರಿ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಹೇಳಿದರು.

ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಭಾನುವಾರ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024 ಉದ್ಘಾಟಿಸಿ ಮಾತನಾಡಿದರು.

ಉಪನ್ಯಾಸಕಿ ಅಕ್ಷಯಾ ಗೋಖಲೆ ದಿಕ್ಸೂಚಿ ಭಾಷಣ ಮಾಡಿದರು. ದ್ರಾವಿಡ ಬ್ರಾಹ್ಮಣ ಪರಿಷತ್ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ತಾಲೂಕು ಬ್ರಾಹ್ಮಣ ಪರಿಷತ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಯುವವೇದಿಕೆ ಅಧ್ಯಕ್ಷೆ ಪವಿತ್ರಾ ಆರ್.ಅಡಿಗ, ಉಪ್ಪುಂದ ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವೀಣಾ ಹೆಬ್ಬಾರ್, ತಾಲೂಕು ಮಹಿಳಾ ಕಾರ್ಯದರ್ಶಿ ಜ್ಯೋತಿ ಐತಾಳ್, ತಾಲೂಕು ಖಜಾಂಚಿ ರಘುರಾಮ ರಾವ್ ಇದ್ದರು. ತಾಲೂಕು ಗೌರವಾಧ್ಯಕ್ಷೆ ಭಾವನಾ ಎಂ.ಭಟ್ ಹರೇಗೋಡು ಪ್ರಾಸ್ತಾವಿಸಿದರು. ವೀಣಾ ಮೂರ್ತಿ ಸ್ವಾಗತಿಸಿದರು. ಸುಪ್ರಿತಾ ಪುರಾಣಿಕ್ ನಿರೂಪಿಸಿದರು. ಲಕ್ಷ್ಮೀ ಐತಾಳ್ ವಂದಿಸಿದರು.

ಗೌರವಾರ್ಪಣೆ

ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಸತತ ನಾಲ್ಕು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಯುಕ್ತ ಹೊಳ್ಳ ಕುಂದಾಪುರ ಹಾಗೂ ಮೊಗೇರಿ ಪಂಚಾಂಗ ಕರ್ತೆ ಅನುಪಮಾ ಅಡಿಗ ಮೊಗೇರಿ ಹಾಗೂ ಉಪನ್ಯಾಸಕಿ ಅಕ್ಷಯಾ ಗೋಖಲೆ ಅವರನ್ನು ಸನ್ಮಾನಿಸಲಾಯಿತು.

ಬ್ರಾಹ್ಮಣತ್ವ ಜಾತಿಯಲ್ಲ, ಅದೊಂದು ಅರ್ಹತೆ. ಶ್ರೇಷ್ಠ ವಿಚಾರ ಜಗತ್ತಿನ ಎಲ್ಲೆಡೆಯಿಂದ ಇಲ್ಲಿ ಹರಿದು ಬರಲಿ ಎನ್ನುವ ರಕ್ತ ನಮ್ಮದು. ಯಾರಿಗೆ ತನ್ನ ಬದುಕಿನ ಸೀಮಿತತೆ ಮೀರಿ ಯೋಚಿಸುವ ಅರ್ಹತೆ ಇದೆಯೋ ಅವನು ಬ್ರಾಹ್ಮಣನಾಗಬಲ್ಲ.

ಅಕ್ಷಯಾ ಗೋಖಲೆ ಉಪನ್ಯಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net