ವಿಪತ್ತುಗಳನ್ನು ನಿರ್ವಹಿಸುವ ಬಗ್ಗೆ ಅರಿವು ಅಗತ್ಯ: ತಹಸೀಲ್ದಾರ್ ಕುಂಞ ಅಹಮದ್ ಸಲಹೆ

17_01_Mdy_03(Vipathu)
Published on

ಮಂಡ್ಯ: ವಿಪತ್ತು ನಿರ್ವಹಣೆ, ಸುರಕ್ಷತೆ ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಹಸೀಲ್ದಾರ್ ಕುಂಞ ಅಹಮದ್ ಸಲಹೆ ನೀಡಿದರು.

ನಗರದ ನಾ.ಸು.ಹರ್ಡಿಕರ್ ಭವನದಲ್ಲಿ ಎನ್‌ಡಿಆರ್‌ಎಫ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣೆ ಹಾಗೂ ಪ್ರಥಮ ಚಿಕಿತ್ಸೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬದಲಾದ ವಾತಾವರಣದಿಂದ ಯಾವಾಗ ಬೇಕಾದರೂ ವಿಪತ್ತು ಸೃಷ್ಟಿಯಾಗುವ ಸನ್ನಿವೇಶವಿದೆ. ಆದ್ದರಿಂದ ಸುರಕ್ಷತೆ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಎನ್‌ಡಿಆರ್‌ಎಫ್ ಇನ್ಸ್‌ಪೆಕ್ಟರ್ ಶಿವಕುಮಾರ್, ಆಕರ್ಶ್, ಸಂದೀಪ್‌ಸಿಂಗ್, ದೇವರಾಜ, ಹಳೇಬೂದನೂರು ರಾಜಣ್ಣ, ಪ್ರಭಾಕರ್, ಪುನೀತ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ತಂಡದವರು ವಿಪತ್ತು ಸಂದರ್ಭದಲ್ಲಿ ಅನುಸರಿಸಿಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net