ಜು.20 ರಂದು ವಿಪಶ್ರೀ ಪ್ರಶಸ್ತಿ ಪ್ರಧಾನ

raichur
raichur
Published on

ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ವಿಪ್ರೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಿಪಶ್ರೀ ಪ್ರಧಾನ ಸಮಾರಂಭವನ್ನು ಜು.20 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆಂದು ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪ್ರಶ್ರೀ ಪುರಸ್ಕಾರವನ್ನು ಹಿರಿಯ ಲೆಕ್ಕಪರಿಶೋಧಕ ಎಸ್.ವೆಂಕಟಕೃಷ್ಣನ್ ಮತ್ತು ನಿವೃತ್ತ ಉಪನ್ಯಾಸಕಿ ಕಲಾವತಿ ರಾಘವೇಂದ್ರರಾವ್ ಬದ್ರಿ ಇವರಿಗೆ ಪ್ರಧಾನ ಮಾಡಲಾಗುತ್ತದೆ. ವಿಶೇಷ ಸಾಧನೆ ಮಾಡಿದ ತ್ರಿವಿಕ್ರಮ ಜೋಷಿ, ಪಿಎಚ್‌ಡಿ ಪದವಿ ಪಡೆದ ಡಾ.ಸಂಜಯ ಕೆ. ಮತ್ತು ವಿಜಯೇಂದ್ರ ಕುಕನೂರು, ಸಿಎ ಪರೀಕ್ಷೆಯಲ್ಲಿ ಉತೀರ್ಣರಾದ ಸುಪ್ರಿಯಾ.ಪಿ. ಇವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಜತೆಗೆ 40 ಜನ ಪಿಯುಸಿ ವಿದ್ಯಾರ್ಥಿಗಳು ಮತ್ತು 30 ಜನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಇತರೆ ಸಾಧಕರಿಗೆ ಸನ್ಮಾನಿಸಿಗೌರವಿಸಲಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕಮಾರ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಸುಗೋಡು ಜಯಸಿಂಹ, ನರಸಿಂಗರಾವ್ ದೇಶಪಾಂಡೆ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಪಾಲಿಕೆ ಅಧ್ಯಕ್ಷ ಸಾಜೀದ ಸಮೀರ್, ಮಹಾಸಭಾ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ.ಸಿ.ಕುಲ್ಕರ್ಣಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ನರಸಿಂಗರಾವ್ ದೇಶಪಾಂಡೆ, ವೇಣುಗೋಪಾಲ ಇನಾಂದಾರ, ಸುಧೀರ ಕುಲಕರ್ಣಿ, ಶ್ರೀನಿವಾಸ, ರಾಮರಾವ್ ಗಣೇಕಲ್, ಶ್ರೀನಿವಾಸ ದೇಸಾಯಿ ಮಲಕಲ್, ಪ್ರಾಣೇಶ ಮುತಾಲಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net