ಜೈನ ಧರ್ಮದ ತತ್ವದಲ್ಲಿ ಹಿಂಸೆಗೆ ಅವಕಾಶ ಇಲ್ಲ

New Bommayi New
Published on

ಹುಬ್ಬಳ್ಳಿ : ಜೈನ ಧರ್ಮದ ತತ್ವ ಪಾಲನೆ ಮಾಡಿದರೆ ಜಗತ್ತಿನಲ್ಲಿ ಹಿಂಸೆ, ಭಯೋತ್ಪಾದನೆಗೆ ಅವಕಾಶವೇ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜೈನ ಬೋಡಿಂಗ್​ಗೆ ಇತ್ತೀಚೆಗೆ ಭೇಟಿ ನೀಡಿ ಶ್ರೀ ಪುಣ್ಯ ಸಾಗರ ಮುನಿಮಹಾರಾಜ ಅವರ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ವಿಶಿಷ್ಟ ವ್ಯವಸ್ಥೆ ಹೊಂದಿರುವ ಜೈನ ಸಮುದಾಯದ ತತ್ವಗಳನ್ನು ಪಾಲಿಸಿದರೆ ಈ ಜಗ್ಗತ್ತಿನಲ್ಲಿ ಯುದ್ದ ಇರುವುದಿಲ್ಲ. ಭಯೋತ್ಲಾದನೆ ಇರುವುದಿಲ್ಲ. ದುರ್ದೈವ ಎಂದರೆ ಧರ್ಮದ ಹೆಸರಲ್ಲಿ ಭಯೊತ್ಪಾದನೆ ನಡೆಯುತ್ತಿದೆ. ಭಯೋತ್ಪಾದನೆ ಮಾಡಿದರೆ ದೇವರು ಸಿಗುತ್ತಾನೆ ಎಂಬ ನಂಬಿಕೆ ಕೆಲವರಲ್ಲಿ ಇದೆ ಎಂದು ಹೇಳಿದರು.

ಹಿಂಸೆಗೆ ಜೈನ, ಬೌದ್ಧ, ಹಿಂದು ಧರ್ಮದಲ್ಲಿ ಸ್ಥಾನ ಇಲ್ಲ. ಈ ಧರ್ಮಗಳು ತ್ಯಾಗದಿಂದ ಹುಟ್ಟಿವೆ. ಬೇರೆ ಧರ್ಮಗಳು ಹೀಗೆ ಇಲ್ಲ. ಶ್ರೀ ಪುಣ್ಯ ಸಾಗರ ಮುನಿ ಮಹಾರಾಜರು ಬರೆದ ಗ್ರಂಥ ಉತ್ತಮವಾದ ಗ್ರಂಥವಾಗಿದ್ದು, ಅತ್ಯಂತ ಕಠಣವಾದ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಅದರಲ್ಲಿ ಪರಿಹಾರ ಇದೆ ಎಂದರು.

ಶಿಗ್ಗಾಂವಿ ತಾಲೂಕಿನಲ್ಲಿ ಇರುವ ಜೈನ ಬಸದಿ ಸಮುದಾಯಗಳ ನಿಮಾಣಕ್ಕೆ 12 ಕೋಟಿ ರೂ. ನೀಡಿದ್ದೇನೆ. ಅರಟಾಳದಲ್ಲಿ ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಸಭಾಭವನ ಆರಂಭವಾಗಲಿದೆ ಎಂದು ಹೇಳಿದರು.

ಪ್ರಮುಖರಾದ ಜಿ.ಜಿ. ಲೋಬೋಗೋಳ ಹಾಗೂ ಇತರರು ಇದ್ದರು.</p>

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net