ಹಿಂಸೆ ಆರೋಪದ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ

Sucide
Published on

ಮಸ್ಕಿ: ಮನೆ ನಿರ್ಮಾಣಕ್ಕೆ ಪಕ್ಕದ ಮನೆಯವರು ತಕರಾರು ವ್ಯಕ್ತಪಡಿಸುತ್ತಿದ್ದಾರೆ ಎಂದು ಮನನೊಂದು ಪಟ್ಟಣದ ಒಂಬತ್ತನೇ ವಾರ್ಡ್ ನಿವಾಸಿ, ಗೃಹಿಣಿ ಸುಮಾ (34) ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಹಳೆಯ ಮನೆ ನೆಲಸಮಗೊಳಿಸಿ ಹೊಸ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಇದಕ್ಕೆ ಪಕ್ಕದ ಮನೆಯ ಗಂಗಮ್ಮ ಬಸವರಾಜ, ವಸಂತ ತಂದೆ ರಾಮಲಿಂಗಪ್ಪ, ಶಿವುಕುಮಾರ್, ವಸಂತ, ವಿನಾಯಕ ಬೆಲ್ಲದ, ಸುಭಾಷ್, ಮಹೇಶ ಇತರ 17 ಜನರು ಮನೆ ನಿರ್ಮಾಣಕ್ಕೆ ವಿನಾಕಾರಣ ತಕರಾರು ಮಾಡಿ ಮಾನಸಿಕ ಹಿಂಸೆ ನೀಡುತ್ತಿರುವ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸುಮಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನನ್ನ ಪತ್ನಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಸುಮಾ ಪತಿ ವಿಶ್ವನಾಥ ಶೆಟ್ಟಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಸಿದ್ದರಾಮ ಬಿದರಾಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net