

ಭಟ್ಕಳ: ಅರಣ್ಯ ವಾಸಿಗಳನ್ನು ಒಕ್ಕಲೆಬ್ಬೀಸುವ ಮಾನದಂಡ 2015 ಕ್ಕೆ ನಿಗದಿಗೊಳಿಸಿ ಇತ್ತೀಚಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹೊರಡಿಸಿದ ಟಿಪ್ಪಣೆಯ ಆದೇಶ ಸುಪ್ರೀಂ ಕೋರ್ಟ್ ಮತ್ತು ಕಾನೂನು ಉಲ್ಲಂಘನೆ ಆಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಸಚಿವರ ಟಿಪ್ಪಣೆಯ ಆದೇಶವನ್ನು ಟೀಕಿಸಿದ್ದಾರೆ.
ಅವರು ಭಾನುವಾರ ಭಟ್ಕಳ ತಾಲೂಕಿನ ಅರಣ್ಯ ವಾಸಿಗಳ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಇಂದು, ಅರಣ್ಯ ಸಂರಕ್ಷಣಾ ಕಾಯಿದೆ 1980 ಅಡಿಯಲ್ಲಿ, 1978 ರ ನಂತರ ಹಾಗೂ ಅರಣ್ಯ ಹಕ್ಕು ಕಾಯಿದೆಯಂತೆ ಡಿಸೆಂಬರ 13, 2005 ರ ನಂತರ ಅತಿಕ್ರಮಣ ಮಂಜೂರಿಗೆ ಕಾನೂನು ಜಾರಿಯಲ್ಲಿ ಇಲ್ಲ. ಅಲ್ಲದೇ ನಿರ್ಭಂಧವಿದೆ. ಇದನ್ನು ಸುಪ್ರೀಂ ಕೋರ್ಟ ಸಹಿತ ನಿರ್ಭಂಧಿಸಿದೆ.
ಆದರೇ, ಅಗಸ್ಟ 2 ರ ಸಚಿವರ ಆದೇಶ ನಿಗದಿಗೊಳಿಸಿದ 2015 ರವರೆಗಿನ ಅವಧಿಗೆ ಯಾವೂದೇ ಅತಿಕ್ರಮಣ ಮಾಡಲೂ ಕಾನೂನಲ್ಲಿ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು. ಸಭೆಯಲ್ಲಿ ಪದಾಧಿಕಾರಿಗಳಾದ ಪಾಂಡು ನಾಯ್ಕ ಬೆಳಕೆ, ದೇವರಾಜ ಗೊಂಡಾ, ಮಂಜುನಾಥ ಮರಾಠಿ, ಶಬ್ಬೀರ್, ಚಂದ್ರು ನಾಯ್ಕ ಗೊರಟೆ, ದೇವೇಂದ್ರ ಮರಾಠಿ ಹೆಜ್ಜೆಲ್, ಕಯುಂ ಕೊಲ, ಎಸ್ ಕೆ ಮನ್ಸುರ್, ಚೇತನ ಮರಾಠಿ,ಮುಂತಾದವವರು ಸಭೆಯಲ್ಲಿ ಮಾತನಾಡಿದರು.