

ಬೆಂಗಳೂರು: ನಗರದ ಎಂಜಿ ರಸ್ತೆಯ ರತ್ನಂ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್ ನೀಡಿದೆ.
ಅಗ್ನಿಶಾಮಕ ದಳದಿಂದ ನಕ್ಷೆ, ಪ್ರಮಾಣಪತ್ರ, ಎನ್ಓಸಿ ಅನುಮತಿ ಪರವಾನಗಿ ಪಡೆಯದೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಅಗ್ನಿ ಅವಡ ಸಂಭವಿಸಿದರೆ ಪ್ರಾಣಿ ಹಾನಿ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರರಾದ ಎಚ್.ಎಂ.ವೆಂಕಟೇಶ್, ನರಸಿಂಹಮೂರ್ತಿ ಎಂಬುವರು ಪಾಲಿಕೆಗೆ ದೂರು ಕೊಟ್ಟಿದ್ದರು.ದೂರಿನ್ವಯ ಅಗ್ನಿಶಾಮಕ ದಳದಿಂದ ಪಡೆದಿರುವ ಪರವಾನಗಿ ಅನುಮತಿ ಪತ್ರವನ್ನು ತಿಳುವಳಿಕೆ ಪತ್ರ ತಲುಪಿದ 7 ದಿನದೊಳಗೆ ಕಚೇರಿಗೆ ಭೇಟಿ ನೀಡಿ ಲಿಖಿತ ಸಮಜಾಯಿಸಿದೊಂದಿಗೆ ನೀಡಬೇಕು.ಇಲ್ಲವಾದಲ್ಲಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುವುದಾಗಿ ಮದ್ಯದಂಗಡಿಗೆ ಪಾಲಿಕೆ ಎಚ್ಚರಿಕೆ ನೀಡಿತ್ತು. ಆದರೂ, ಮದ್ಯದಂಗಡಿಯಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ.
2ನೇ ನೋಟಿಸ್ ನೀಡಿಕೆ: ಮೊದಲ ನೋಟಿಸ್ಗೆ ಮದ್ಯದಂಗಡಿಯಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ, 2ನೇ ನೋಟಿಸ್ ನೀಡಲಾಗುವುದು. 2ನೇ ನೋಟಿಸ್ಗೂ ಉತ್ತರ ನೀಡದಿದ್ದರೆ 3 ನೋಟಿಸ್ ಕೊಡಲಾಗುವುದು. 3ನೇ ನೋಟಿಸ್ಗೂ ಮಾಹಿತಿ ನೀಡದಿದ್ದರೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಚ್ಚಿಸಲಾಗುವುದು ಎಂದು ಬಿಬಿಎಂಪಿ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ.