

ವಿಜಯಪುರ: ಪ್ರಸ್ತುತ ಸಮಾಜದಲ್ಲಿ ಜಾತಿಯತೆ, ಭೇದ&ಭಾವ ತಾಂಡವವಾಡುತ್ತಿದ್ದು, ಹೆಚ್ಚುತ್ತಿರುವ ಅತ್ಯಾಚಾರ&ಅನಾಚಾರದಂತಹ ಹೀನ ಕೃತ್ಯಗಳಿಂದ ಮಾನವ ಹಕ್ಕುಗಳು ಉಲ್ಲಂನೆ ಆಗುತ್ತಿವೆ ಎಂಬುವುದು ಬೇಸರದ ಸಂಗತಿ ಎಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ ಮಚಾದೊ ವಿಷಾದ ವ್ಯಕ್ತಪಡಿಸಿದರು.
ನಗರದ ಎಂಜಿ ರಸ್ತೆಯಲ್ಲಿ ಸಂತ ಅನ್ನಮ್ಮವರ ದೇವಾಲಯದ ಸಭಾಂಗಣದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ಮತ್ತು ಜಿಲ್ಲಾ ಅಸಂಟಿತ ಯುವಕ/ಯುವತಿಯರ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನತೆ ಮಾನವ ಹಕ್ಕುಗಳ ಕುರಿತು ಅರಿವು ಹೊಂದಬೇಕು. ನಮ್ಮ ದೇಶದ ಸಂವಿಧಾನ ನಮಗೆಲ್ಲರಿಗೂ ಸಮಾನ ಹಕ್ಕುಗಳನ್ನು ಒದಗಿಸಿದೆ. ಕಾನೂನಿನ ಮುಂದೆ ನಾವೆಲ್ಲರೂ ಸರಿ ಸಮಾನರು. ಸಂವಿಧಾನದ ಮೌಲ್ಯಗಳನ್ನು ನಾವೆಲ್ಲರೂ ಎತ್ತಿ ಹಿಡಿಯೋ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಸ್ವೀಟ್ ಸಂಸ್ಥೆಗಳ ಮುಖ್ಯಸ್ಥ ಫಾದರ್ ಫ್ರಾನ್ಸಿಸ್ ಮಿನೆಜಸ್ ಮಾತನಾಡಿ, ಸಮಾಜವನ್ನು ಉತ್ತಮ ರೀತಿಯಲ್ಲಿ ಮುಂದುವರಿಸುವಲ್ಲಿ ಯುವಕರ ಪಾತ್ರ ಬಹುಮುಖ್ಯ ಎಂದರು.
ಮುಂಬೈ ಮೈದ್ರುನಾ ಸಿಸ್ಟರ್ಸ್ ಪ್ರಾಂತ್ಯಾಧಿಕಾರಿ ಸಿಸ್ಟರ್ ಡೇಸಿ ಸಿರಿಯಾಕ್ ಕಾರ್ಯಕ್ರಮ ಉದ್ಘಾಟಿಸಿ, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಹಕ್ಕುಗಳ ಉಲ್ಲಂನೆಯಾದಾಗ ಹೇಗೆ ನ್ಯಾಯ ಪಡೆದುಕೊಳ್ಳಬೇಕು ಎಂಬುವುದರ ಕುರಿತು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜೇವಿಯರ್ ಸದನ ಮುಖ್ಯಸ್ಥ ಫಾದರ್ ಎಡ್ವರ್ಡ್ ಫೀಲಿಪ್, ಲೊಯೋಲ ತಾಂತ್ರಿಕ ತರಬೇತಿ ಕೇಂದ್ರದ ನಿರ್ದೇಶಕ ಫಾದರ್ ಆ್ಯಂಟನಿ ಲಾರೆನ್ಸ್ ಮಾತನಾಡಿದರು. ಕಾರ್ಯಸಂಯೋಜಕಿ ಸಿಸ್ಟರ್ ಜಯಾ, ಯುವ ಮುಖಂಡರಾದ ಸೋಮನಾಥ ಬಾಂಡೇಕರ, ಅರ್ಪಿತಾ ಗೊಳಸಂಗಿ, ರಾಜು ಸಿಂಗೆ, ಸಂದೀಪ ದೋತ್ರೆ, ನಿಖಿಲ್ ಸಿಂಗೆ, ಪರಸುರಾಮ ಕುಮಟಗಿ, ಸಾಧಿಕ ಇರಾನಿ, ನಿಸಾರ ಇರಾನಿ, ಸುಷ್ಮಿತಾ ಬಾಂಡೇಕರ ಮತ್ತಿತರರಿದ್ದರು.
ರವಿ ದೊಡಮನಿ ಸ್ವಾಗತಿಸಿದರು. ಮಿನಾ ಸಿಂಗೆ ನಿರೂಪಿಸಿದರು. ಶೃತಿ ನೀಡೋಣಿ ವಂದಿಸಿದರು.