ವಸತಿ ನಿಲಯದ ನಿಯಮ ಉಲ್ಲಂಘನೆ, ಬಾಲಕಿಯರೊಂದಿಗೆ ಜನ್ಮ ದಿನ ಆಚರಿಸಿಕೊಂಡ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆಯಿಂದ ವಾರ್ಡನ್‌ಗೆ ನೋಟಿಸ್

SOCIAL WELLFARE OFFICE VIJAYAPUR
Published on

ವಿಜಯಪುರ: ವಸತಿ ನಿಲಯದ ನಿಯಮ ಉಲ್ಲಂಘಿಸಿ ವಿದ್ಯಾರ್ಥಿನಿಯರನ್ನು ಹೊರಗಡೆ ಕರೆದೊಯ್ದು ಜನ್ಮ ದಿನ ಆಚರಿಸಿಕೊಂಡ ವಾರ್ಡನ್‌ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಇಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ವಾರ್ಡನ್ ಶಕುಂತಲಾ ರಜಪೂತಗೆ ನೋಟಿಸ್ ನೀಡಲಾಗಿದೆ. ಆ. 2 ರಂದು ವಸತಿ ನಿಲಯದ ಸಿಬ್ಬಂದಿ ರಿಜ್ವಾನ್‌ಬೇಗಂ ಮುಲ್ಲಾ ಇವರ ಜನ್ಮ ದಿನಾಚರಣೆ ಹಿನ್ನೆಲೆ ಸಂಜೆ 7 ಗಂಟೆ ನಂತರ ವಿದ್ಯಾರ್ಥಿನಿಯರನ್ನು ಹೊರಗಡೆ ಕರೆದೊಯ್ದಿದ್ದಾರೆ.

ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರಿರುವ ಕಾರಣ ಹೆಚ್ಚಿನ ಸುರಕ್ಷತೆ ಅವಶ್ಯಕತೆ ಇದೆ. ಅದಕ್ಕಾಗಿ ನಿಯಮ ಸಹ ರೂಪಿಸಲಾಗಿದೆ. ಸಂಜೆ 6 ಗಂಟೆಯ ನಂತರ ಯಾವುದೇ ಬಾಲಕೀಯರು ಅನುಮತಿ ಇಲ್ಲದೇ ಹೊರಗಡೆ ಹೋಗುವಂತಿಲ್ಲ. ಹೀಗಾಗಿ ಯಾರ ಅನುಮತಿ ಮೇರೆಗೆ ಹೊರಗಡೆ ಹೋಗಿ ಜನ್ಮ ದಿನ ಆಚರಿಸಲಾಗಿದೆ? ವಸತಿ ನಿಲಯದ ಹೊರಗಡೆ ಹೋಗಿ ಜನ್ಮ ದಿನ ಆಚರಿಸಿರುವುದು ಕರ್ತವ್ಯದ ನಿರ್ಲಕ್ಷೃವಾಗಿದೆ. ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಶಿಸ್ತು ಕ್ರಮ ಏಕೆ ಜರುಗಿಸಬಾರದೆಂಬುದಕ್ಕೆ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಆ. 7 ರಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net