ಕೃಷಿ ವಿವಿ ಕುಲಪತಿಗೆ ಬೆಂಬಿಡದ ಆಮಂತ್ರಣ ಕಾಟ; ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರ ಅಸಮಾಧಾನ

(Sangamesh Babaleshwar - Copy
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ವಿಶ್ವವಿದ್ಯಾಲಯ ಕುಲಪತಿಗೆ ಶಿಷ್ಟಾಚಾರದ ಕಾಟ ತಪ್ಪುತ್ತಿಲ್ಲ. ಕೃಷಿ ಮೇಳ ಮಾಡುತ್ತಿರುವ ಆಡಳಿತಾಽಕಾರಿಗಳು ಆಹ್ವಾನ ಪತ್ರಿಕೆಯಲ್ಲಿ ಕುಲಸಚಿವರ ಹೆಸರು ಹಾಕದೆ ಶಿಷ್ಟಾಚಾರ ಉಲ್ಲಂಘಿಸಿತ್ತು. ಅದನ್ನು ಸರಿಪಡಿಸಿಕೊಂಡ ಬೆನ್ನಲ್ಲೇ ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರನ್ನು ಮರೆತಿದೆ.
ರಾಜ್ಯ ವ್ಯಾಪ್ತಿಯನ್ನು ಹೊಂದಿರುವ ಬಾಲವಿಕಾಸ ಅಕಾಡೆಮಿ ಧಾರವಾಡಲ್ಲಿದೆ. ಅದಕ್ಕೊಬ್ಬ ಅಧ್ಯಕ್ಷ ಇದ್ದಾರೆ ಎನ್ನುವುದು ಕೃಷಿ ವಿಶ್ವವಿದ್ಯಾಲಯ ಆಡಳಿತಾಽಕಾರಿಗಳ ಗಮನಕ್ಕೆ ಬಂದAತಿಲ್ಲ. ಅಽಕೃತ ಆಹ್ವಾನ ಬಾರದಿರುವುದರಿಂದ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಲಪತಿ ಡಾ. ಪಿ.ಎಲ್. ಪಾಟೀಲ ಅವರದು ಸರ್ವಾಽಕಾರಿ ಧೋರಣೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಸಂಗಮೇಶ ಬಬಲೇಶ್ವರ ಕುಲಪತಿಗೆ ಬರೆದಿರುವ ಪತ್ರದಲ್ಲೇನಿದೆ…?
`ಗೌರವಾನ್ವಿತ ಕುಲಪತಿಗಳೇ, ಸರ್ಕಾರದ ವ್ಯವಸ್ಥೆಯಲ್ಲಿ ನಾವೆಲ್ಲರೂ ಕೆಲಸ ಮಾಡುವಾಗ ಕನಿಷ್ಠ ಸೌಜನ್ಯ ಇರಬೇಕು. ಕುಲಪತಿ ಎಂದರೆ ಬಾಯಿಗೆ ಬಂದದ್ದೇ ಬೈಲಾ ಅಲ್ಲ. ಮುಖ್ಯಮಂತ್ರಿ ಭಾಗವಹಿಸುತ್ತಿರುವ ಕಾರ್ಯಕ್ರಮದಲ್ಲಿ ನಮಗೆ ಶಿಷ್ಟಾಚಾರ ಅನ್ವಯಿಸುವುದಿಲ್ಲವೇ? ಅಥವಾ ಇದು ನಿಮ್ಮ ಸರ್ವಾಽಕಾರಿ ಧೋರಣೆಯೇ? ಅಥವಾ ಯಾರೇನು ಮಾಡುವರು ಎನ್ನುವ ದುರಹಂಕಾರವೇ? ಕುಲಸಚಿವರ ಹೆಸರು ಹಾಕದಿರುವ ಬಗ್ಗೆ ಮಾಧ್ಯಮದ ಮುಂದೆ ಉಡಾಫೆ ಉತ್ತರ ನೀಡುತ್ತೀರಿ. ನಿಮ್ಮ ಹಿರಿತನಕ್ಕೂ ವ್ಯಕ್ತಿತ್ವಕ್ಕೂ ತಾಳೆಯಾಗುತ್ತಿಲ್ಲ. ಈ ಕ್ಷಣದವರೆಗೂ ನಿಮ್ಮ ಕಾರ್ಯಾಲಯದವರು ಕನಿಷ್ಠ ಸೌಜನ್ಯಕ್ಕೂ ಆಮಂತ್ರಣ ಪತ್ರಿಕೆ ನೀಡಿಲ್ಲ. ಗೌರವಾನ್ವಿತ ರಾಜ್ಯಪಾಲರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಿಮ್ಮ ವರ್ತನೆಯಲ್ಲಿ ಒಬ್ಬ ಸರ್ವಾಽಕಾರಿಯನ್ನು ಕಂಡಿದ್ದೆ. ನಾನು ರೈತನ ಮಗ. ವಿಶ್ವವಿದ್ಯಾಲಯ ರೈತರ ಮತ್ತು ರಾಜ್ಯದ ಜನರ ಸ್ವತ್ತು. ಸರ್ವಾಽಕಾರಿ ಆಗಿರಬೇಕೆನ್ನುವ ಇಚ್ಛೆ ಇದ್ದರೆ ದಕ್ಷಿಣ ಕೊರಿಯಾಕ್ಕೆ ಹೋಗಿ. ವಿಶ್ವವಿದ್ಯಾಲಯದಲ್ಲಿ ಸಂವಿಧಾನದತ್ತ ಹುದ್ದೆಯಲ್ಲಿದ್ದು ಅದರ ಘನತೆಗೆ ತಕ್ಕಂತೆ ಇರಿ. ನಾನು ರಾಜ್ಯಪಾಲರ ಕಾರ್ಯಾಲಯವನ್ನು ಸಂಪರ್ಕಿಸುತ್ತೇನೆ. ನಿಮ್ಮ ದುರ್ವರ್ತನೆಯ ಬಗ್ಗೆ ಸಾರ್ವಜನಿಕವಾಗಿ ಹೋರಾಟ ಮಾಡುತ್ತೇನೆ. ವ್ಯಕ್ತಿ ಹುದ್ದೆಯಿಂದ ದೊಡ್ಡವನಾಗುವುದಿಲ್ಲ. ಹುದ್ದೆಗೆ ಗೌರವ ತರುವ ವ್ಯಕ್ತಿತ್ವ ಬೆಳೆಸಿಕೊಂಡವನು ಹುದ್ದೆಯ ಘನತೆ ಹೆಚ್ಚಿಸುತ್ತಾರೆ ಎಂದು ಸಂಗಮೇಶ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net