

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಠಾಣೆಯ ಪೊಲೀಸರು ಬುಲೆಟ್ ದ್ವಿಚಕ್ರ ವಾಹನಕ್ಕೆ ಅಳವಡಿಸಿದ್ದ ಡಿಫೆಕ್ಟಿವ್ ಸೈಲೆನ್ಸರ್‌ನ್ನು ತೆಗೆಸಿದ್ದು ನ್ಯಾಯಾಲಯವು ದ್ವಿಚಕ್ರ ವಾಹನ ಚಾಲಕನ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತ್ತು ಪಡಿಸಿ, 11,500 ರೂಗಳ ದಂಡ ಸಹ ವಿಧಿಸಿದೆ.
ಚಿಂತಾಮಣಿ ನಗರಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಹಬೂದ್ದೀನ್ ಗಸ್ತು ಮಾಡುತ್ತಿದ್ದಾಗ ಬುಲೆಟ್ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದಿದ್ದು ತ್ರಿಬಲ್ ರೈಡಿಂಗ್, ವಿತೌಟ್ ಹೆಲೈಟ್ ಮೂಲಕ ನಿಯಮ ಉಲ್ಲಂಘನೆ, ಅಲ್ಟ್ರಾನೇಟಿವ್ ವೆಹಿಕಲ್, ಡಿಪೆಕ್ಟಿವ್ ಸೈಲೆನ್ಸರ್ ಕಂಡು ಬಂದಿದೆ. ಇದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ನ್ಯಾಯಾಲಯವು ದ್ವಿಚಕ್ರ ವಾಹನ ಚಾಲಕನ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತ್ತು ಪಡಿಸಿದಲ್ಲದೇ 11,500 ರೂಗಳ ದಂಡ ಸಹ ವಿಧಿಸಿದೆ.